ರಾಜ್ಯಸಭಾ ಸದಸ್ಯರಾಗಿ ಪಾಸ್ವಾನ್ ಪ್ರಮಾಣ ವಚನ

Update: 2019-07-01 15:08 GMT

ಹೊಸದಿಲ್ಲಿ, ಜು.1: ಕಳೆದ ವಾರ ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಮಾಜಿ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಸೋಮವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯಸಭೆಯ ಅಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಿಂದಿಯಲ್ಲಿ ಪ್ರಮಾಣವಚನ ಬೋಧಿಸಿದರು. ರಾಜ್ಯಸಭೆಯ ಸದಸ್ಯರಾಗಿದ್ದ ರವಿಶಂಕರ್ ಪ್ರಸಾದ್ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕಾರಣ ತೆರವಾದ ಸ್ಥಾನಕ್ಕೆ ಪಾಸ್ವಾನ್ ಆಯ್ಕೆಯಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ನೀವು ಎಷ್ಟು ಬಾರಿ ಸಂಸತ್‌ಗೆ ಆಯ್ಕೆಯಾಗಿದ್ದೀರಿ ಎಂದು ಪಾಸ್ವಾನ್‌ರನ್ನು ನಾಯ್ಡು ಪ್ರಶ್ನಿಸಿದರು. 11 ಬಾರಿ ಎಂದು ಪಾಸ್ವಾನ್ ಉತ್ತರಿಸಿದರು.

ಇದೇ ಪ್ರಶ್ನೆಯನ್ನು ಎನ್‌ಸಿಪಿ ಮುಖಂಡ ಶರದ್ ಪವಾರ್‌ರಲ್ಲಿ ಕೇಳಿದಾಗ ಅವರು 14 ಎಂದುತ್ತರಿಸಿದರು. ಅನುಭವಿ ಸಂಸದರು ಸದನದಲ್ಲಿ ಇದ್ದರೆ ಒಳ್ಳೆಯದು ಎಂದು ನಾಯ್ಡು ಹೇಳಿದರು. ಒಡಿಶಾದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಡಿ ಬೆಂಬಲಿತ ಬಿಜೆಪಿ ಅಭ್ಯರ್ಥಿ ಅಶ್ವಿನಿ ಬೈಷ್ಣಬ್ ಅವರೂ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News