ಐಎಂಎ ವಂಚನೆ ಪ್ರಕರಣ: ಮುಂದುವರೆದ ಸಿಟ್ ದಾಳಿ, 55 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ

Update: 2019-07-02 16:13 GMT

ಬೆಂಗಳೂರು, ಜು.2: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು ದಾಳಿ ಮುಂದುವರೆಸಿದ್ದು, ನಗರದ ಮೂರು ಮಳಿಗೆಗಳಲ್ಲಿ ಶೋಧ ನಡೆಸಿ, 55.22 ಲಕ್ಷ ರೂ.ವೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಐಎಂಎ ಸಮೂಹ ಸಂಸ್ಥೆಗಳ ಒಡೆತನದ ಇಲ್ಲಿನ ಮಲ್ಲೇಶ್ವರಂ, ಯಶವಂತಪುರ ಹಾಗೂ ವಿಜಯನಗರದಲ್ಲಿದ್ದ ಫ್ರಂಟ್‌ಲೈನ್ ಫಾರ್ಮಾ ಎಂಬ ಹೆಸರಿನ ಔಷಧಾಲಯಗಳ ಮೇಲೆ ಡಿವೈಎಸ್ಪಿ ಅನಿಲ್ ಭೂಮಿರೆಡ್ಡಿ ನೇತೃತ್ವದಲ್ಲಿ ಮಂಗಳವಾರ ದಾಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ 53 ಲಕ್ಷ ಮೌಲ್ಯದ ಔಷಧಿಗಳು, ವಿದ್ಯುನ್ಮಾನ ಉಪಕರಣ ಹಾಗೂ 2.22 ಲಕ್ಷ ರೂ. ನಗದು ಜಪ್ತಿ ಮಾಡಿ, ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಸಿಟ್ ತನಿಖಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News