ಉಪನಗರ ರೈಲು ಯೋಜನೆ ಡಿಪಿಆರ್ ಬದಲಿಸಲು ಚಿಂತನೆ

Update: 2019-07-03 15:04 GMT

ಬೆಂಗಳೂರು, ಜು.3: ರೈಲ್ವೆ ಇಲಾಖೆಯು ಉಪನಗರ ರೈಲು ಯೋಜನೆ ಡಿಪಿಆರ್ ಬದಲಿಸಲು ಚಿಂತನೆ ನಡೆಸಿದ್ದು, ಸಂಚಾರ ದಟ್ಟಣೆ ಪರಿಹಾರಕ್ಕಾಗಿ ಮುಂಬೈ ಮಾದರಿಯಲ್ಲಿ ರೂಪಿಸಲಾಗಿರುವ ರೈಲು ಯೋಜನೆಯ ವಿಸ್ತೃತ ವರದಿ ಪರಿಷ್ಕರಣೆಗೆ ಇಲಾಖೆ ಮುಂದಾಗಿದೆ.

ಯೋಜನೆಗೆ ರೈಟ್ಸ್ ಸಂಸ್ಥೆ ಈಗಾಗಲೇ ಡಿಪಿಆರ್ ಸಲ್ಲಿಸಿದೆ. ಇದರಲ್ಲಿ ಕೆಲವು ಬದಲಾವಣೆಗಳನ್ನು ತರಲು ರೈಲ್ವೆ ಇಲಾಖೆ ಸೂಚಿಸಿದೆ. ಈ ಹಿಂದಿನ ಡಿಪಿಆರ್‌ನಂತೆ ಒಟ್ಟು 161 ಕಿ.ಮೀ ರೈಲು ಸಂಪರ್ಕ ಏರ್ಪಡಲಿದೆ. ಜೊತೆಗೆ 60 ಕಿ.ಮೀ ಎಲಿವೇಟೆಡ್ ಮಾರ್ಗ ಮತ್ತು 101 ಕಿ.ಮೀ ನೆಲಮಟ್ಟದ ಮಾರ್ಗ ನಿರ್ಮಿಸುವುದು ಅಥವಾ ಹಳೆಯ ಮಾರ್ಗ ಅಭಿವೃದ್ಧಿಪಡಿಸಬೇಕಿದೆ. ಅಲ್ಲದೆ ಒಟ್ಟು 81 ರೈಲು ನಿಲ್ದಾಣಗಳನ್ನು ಹೊಸದಾಗಿ ನಿರ್ಮಿಸಬೇಕಿದೆ.

ಅದರಲ್ಲಿ 30 ಎಲಿವೇಟೆಡ್ ಮತ್ತು 51 ನೆಲಮಟ್ಟದ ನಿಲ್ದಾಣಗಳಾಗಿವೆ. ಯೋಜನೆಗೆ 22 ಸಾವಿರ ಕೋಟಿ ರೂ. ವ್ಯಯಿಸುತ್ತಿದೆ. ಯೋಜನೆಯಂತೆ ಕೆಂಗೇರಿ-ವೈಟ್‌ಫೀಲ್ಡ್, ಬೆಂಗಳೂರು ನಗರ ನಿಲ್ದಾಣ, ರಾಜಾನುಕುಂಟೆ, ನೆಲಮಂಗಲ-ಬೈಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ-ದೇವನಹಳ್ಳಿಗೆ ಸಂಪರ್ಕಿಸಲಾಗುತ್ತಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News