ಸರಕಾರಿ ನೌಕರರ ವರ್ಗಾವಣೆ ಅವಧಿ ವಿಸ್ತರಣೆ
Update: 2019-07-03 22:34 IST
ಬೆಂಗಳೂರು, ಜು.3: 2019-20ನೆ ಸಾಲಿನ ಸರಕಾರಿ ನೌಕರರ ವರ್ಗಾವಣೆಯನ್ನು ಜೂ.30ರೊಳಗೆ ಪೂರ್ಣಗೊಳಿಸಲು ಆದೇಶಿಸಲಾಗಿತ್ತು. ಆದರೆ, ಈಗ ಪ್ರಸ್ತುತ ವರ್ಗಾವಣೆ ಅವಧಿಯನ್ನು ಜು.10ರವರೆಗೆ ವಿಸ್ತರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.