ಬಿಎಂಟಿಸಿ ಬಸ್‌ಪಾಸ್ ಅವಧಿ ಜು.8ವರೆಗೆ ವಿಸ್ತರಣೆ

Update: 2019-07-03 17:13 GMT

ಬೆಂಗಳೂರು, ಜು.3: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) 2018-19ನೇ ಸಾಲಿನಲ್ಲಿ ವಿತರಿಸಿದ್ದ ಹಳೆಯ ಸ್ಮಾರ್ಟ್‌ಕಾರ್ಡ್ ಬಸ್ ಪಾಸ್ ಅವಧಿಯನ್ನು ಜು.8ರವರೆಗೆ ವಿಸ್ತರಿಸಿದೆ.

ವಿದ್ಯಾರ್ಥಿಗಳು ಹಳೆಯ ಪಾಸ್, ಶಾಲಾ-ಕಾಲೇಜಿಗೆ ದಾಖಲಾಗಿರುವ ಶುಲ್ಕ ರಸೀದಿಯೊಂದಿಗೆ ಉಚಿತವಾಗಿ ಜು.8ರವರೆಗೆ ಪ್ರಯಾಣ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಾಸ್‌ಗಳನ್ನು ಪಡೆಯಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿಯು ಪಾಸ್ ಅವಧಿಯನ್ನು ವಿಸ್ತರಣೆ ಮಾಡಿದೆ.

ವಿದ್ಯಾರ್ಥಿಗಳಿಗೆ ಹೊಸ ಸ್ಮಾರ್ಟ್ ಕಾರ್ಡ್ ಪಾಸ್‌ಗಳನ್ನು ವಿತರಿಸಲು ಮತ್ತು ನವಿಕರಣಕ್ಕೆ 15 ಪ್ರಮುಖ ಬಸ್ ನಿಲ್ದಾಣಗಳಲ್ಲಿ 50 ಕೌಂಟರ್‌ಗಳನ್ನು ತೆರೆಯಲಾಗಿದೆ. ಜೂ.17ರಿಂದಲೇ ಪಾಸ್‌ಗಳನ್ನು ವಿತರಣೆ ಮಾಡುತ್ತಿದ್ದು, ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿಗಳು ಲಭ್ಯ ಇವೆ. ಈವರೆಗೆ ಆನ್‌ಲೈನ್ ಮೂಲಕ 76,700 ಅರ್ಜಿಗಳನ್ನು ಸ್ವಿಕರಿಸಿದ್ದು, 21,600 ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News