ಕಶ್ಯಪ್, ಸೌರಭ್ ಪ್ರಿ- ಕ್ವಾರ್ಟರ್ ಪೈನಲ್‌ಗೆ

Update: 2019-07-05 03:32 GMT

ಕಾಲ್ಗೆರಿ, ಜು.4: ಮಾಜಿ ಕಾಮನ್‌ವೆಲ್ತ್ ಚಾಂಪಿಯನ್ ಪಿ.ಕಶ್ಯಪ್ ಮತ್ತು ಹಾಲಿ ನ್ಯಾಶನಲ್ ಚಾಂಪಿಯನ್ ಸೌರಭ್ ವರ್ಮಾ ಕೆನಡಾ ಓಪನ್ ಸೂಪರ್ 100 ಟೂರ್ನಮೆಂಟ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ 6ನೇ ಶ್ರೇಯಾಂಕದ ಕಶ್ಯಪ್ ಅವರು ಫ್ರಾನ್ಸ್‌ನ ಲೂಕಸ್ ಕಾರ್ವಿ ವಿರುದ್ಧ 21-12, 21-17 ಅಂತರದಲ್ಲಿ ಜಯ ಗಳಿಸಿದರು.

ಸೌರಭ್ ಅವರು ಕೆನಡಾದ ಬಿ.ಆರ್.ಸಂಕೀರ್ತ್‌ರನ್ನು 21-14, 21-11 ಅಂತರದಲ್ಲಿ ಮಣಿಸಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು. ಕಳೆದ ವರ್ಷ ಕಶ್ಯಪ್ ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ಕಶ್ಯಪ್ ಅವರು ಚೀನಾದ ರೆನ್ ಪೆಂಗ್ ಬೊ ಅವರನ್ನು ಎದುರಿಸಲಿದ್ದಾರೆ.

26ರ ಹರೆಯದ ಸೌರಭ್ ಅವರು ಚೀನಾದ ಸನ್ ಫೆಯ್ ಕ್ಸಿಯಾಂಗ್‌ರನ್ನು ಎದುರಿಸುವರು. ಸೌರಭ್ ಕಳೆದ ರಶ್ಯ ಮತ್ತು ನೆದರ್‌ಲ್ಯಾಂಡ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಅಜಯ್ ಜಯರಾಂ, ಎಚ್.ಎಸ್ ಪ್ರಣಯ್ ಮತ್ತು ಲಕ್ಶಿಯಾ ಸೆನ್‌ಸೋತು ಕೂಟದಿಂದ ನಿರ್ಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News