ರೂಪದರ್ಶಿಯೊಂದಿಗೆ ಅಸಭ್ಯ ವರ್ತನೆ: ದೂರು ದಾಖಲು

Update: 2019-07-05 17:00 GMT

ಬೆಂಗಳೂರು, ಜು.5: ಛಾಯಾಚಿತ್ರಗಾರನೊಬ್ಬ ರೂಪದರ್ಶಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಇಲ್ಲಿನ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಂಕರ ನಗರ ಮುಖ್ಯ ರಸ್ತೆಯಲ್ಲಿರುವ ಗೋಲ್ಡನ್ ಲೈಟ್ ಕ್ರಿಯೇಶನ್ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಛಾಯಾಚಿತ್ರಗಾರ ಶರತ್‌ಕುಮಾರ್ ಎಂಬಾತ ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ರೂಪದರ್ಶಿ ಅನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಶರತ್‌ಕುಮಾರ್, ಚಿತ್ರೀಕರಣ ಮಾಡುತ್ತೇನೆ ಎಂದು ನಂಬಿಸಿ ಸ್ಟುಡಿಯೊಗೆ ಕರೆ ತಂದಿದ್ದ. ಬಳಿಕ, ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ರೂಪದರ್ಶಿ ದೂರಿನಲ್ಲಿ ಆರೋಪಿಸಿದ್ದಾಳೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News