ಮದೀನಾಕ್ಕೆ ತಲುಪಿದ ಭಾರತದ ಪ್ರಥಮ ಹಜ್ಜಾಜಿಗಳ ತಂಡ

Update: 2019-07-06 05:50 GMT

ಮದೀನಾ: ಪವಿತ್ರ ಹಜ್ಜ್ ನಿರ್ವಹಿಸಲು ಪ್ರಥಮವಾಗಿ ಭಾರತದ ದೆಹಲಿಯಿಂದ ಹೋದ ಹಜ್ಜಾಜಿಗಳನ್ನು ಮದೀನಾದ ಮುಹಮ್ಮದ್ ಬಿನ್ ಅಬ್ದುಲ್‌ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆ.ಸಿ‌.ಎಫ್ ಮದೀನಾ ಮುನವ್ವರ ಸೆಕ್ಟರ್ ಕಾರ್ಯಕರ್ತರು ಬರಮಾಡಿಕೊಂಡರು.

ಈ ಸಂದರ್ಭ ಭಾರತದ ರಾಯಭಾರಿಯಾಗಿ ಆಗಮಿಸಿದ ಡಾ. ಆಸಫ್ ಸಯೀದ್ ಹಾಗೂ ಭಾರತ ದೂತವಾಸ ಕಚೇರಿಯ ಸಲಹೆಗಾರರಾದ ನೂರ್ ರಹ್ಮಾನ್ ಶೇಖ್ ರನ್ನು ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ತಂಡದ ವತಿಯಿಂದ ಸನ್ಮಾನಿಸಲಾಯಿತು.

ಕಳೆದ ಹಲವಾರು ವರ್ಷಗಳಿಂದ  ಹಜ್ಜಾಜಿಗಳ ಸೇವೆಯಲ್ಲಿ ನಿರತರಾಗಿರುವ ಕೆ.ಸಿ.ಎಫ್ ಇದರ ಮದೀನಾ ಮುನವ್ವರ ವಿಭಾಗದ ಚೇರ್ಮನ್ ಆಗಿರುವ ತಾಜುದ್ದೀನ್ ಸುಳ್ಯ, ರಝಾಕ್ ಅಳಕೆಮಜಲ್, ಕನ್ವಿನರ್ ಗಳಾದ ರಝಾಕ್ ಉಳ್ಳಾಲ, ಜಬ್ಬಾರ್ ಕಾವಳಕಟ್ಟೆ, ತಂಡದ ಲೀಗಲ್ ಅಡ್ವೈಸರ್ ಆಗಿರುವ ಇಕ್ಬಾಲ್ ಕುಪ್ಪೆಪದವು ಹಾಗೂ ಮದೀನಾ ಮುನವ್ವರ ಸೆಕ್ಟರ್ ತಂಡದ ಸ್ವಯಂ ಸೇವಕರಾದ ಅಶ್ರಫ್ ಕಿನ್ಯ, ಅಶ್ರಫ್ ಸಖಾಫಿ ನೂಜಿ, ಹುಸೈನಾರ್ ಮಾಪಲ್, ಯು.ಎಚ್. ಅಬೂಬಕರ್ ಉದ್ದಬೆಟ್ಟು, ಸಿದ್ದೀಕ್ ಕನ್ಯಾನ, ಯೂಸುಫ್ ಮದನಿ ಕೊಯ್ಯೂರು, ಕುತುಬುದ್ದೀನ್ ವರಟ್ಟಿಲ್, ಮುಸ್ತಫಾ ಕುಪ್ಪೆಪದವು, ಹಕೀಮ್ ಬೋಳಾರ್, ಆಸಿಫ್ ಬದ್ಯಾರ್ ಹಾಗೂ ‌ಕೆ.ಸಿ.ಎಫ್ ಸೌದಿ ಅರೇಬಿಯಾ ಕನ್ವಿನರ್ ಆಗಿರುವ ಇಬ್ರಾಹಿಂ ಕಿನ್ಯ ಸಹಿತ ಹಲವಾರು ಕಾರ್ಯಕರ್ತರು ಮದೀನಾ ಮುನವ್ವರದಲ್ಲಿ  ಸೇವಾರ೦ಗದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News