ಏಕದಿನದಲ್ಲಿ ಬುಮ್ರಾಗೆ 100ನೇ ವಿಕೆಟ್

Update: 2019-07-07 06:51 GMT

ಲಂಡನ್, ಜು.6: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.

 ಶ್ರೀಲಂಕಾ ವಿರುದ್ಧ ಶನಿವಾರ ಕೊನೆಯ ಲೀಗ್ ಪಂದ್ಯದಲ್ಲಿ 3.4ನೇ ಓವರ್‌ನಲ್ಲಿ ಲಂಕಾದ ಆರಂಭಿಕ ದಾಂಡಿಗ ಮತ್ತು ನಾಯಕ ದಿಮುತ್ ಕರುಣರತ್ನೆ ವಿಕೆಟ್ ಉಡಾಯಿಸುವ ಮೂಲಕ 100 ವಿಕೆಟ್‌ಗಳ ಮೈಲುಗಲ್ಲನ್ನು ಮುಟ್ಟಿದರು. ಬುಮ್ರಾ ಬೌಲಿಂಗ್‌ನಲ್ಲಿ ಕರುಣರತ್ನೆ ಅವರು ಧೋನಿಗೆ ಕ್ಯಾಚ್ ನೀಡುವ ಮೂಲಕ ನಿರ್ಗಮಿಸಿದರು.

 ಬುಮ್ರಾ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಮುಹಮ್ಮದ್ ಶಮಿ ವೇಗವಾಗಿ ಅಂದರೆ 56 ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಆಗಿದ್ದಾರೆ.

ಬುಮ್ರಾ 57 ಪಂದ್ಯಗಳಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಸಾಧನೆ ಮಾಡಿದ ಭಾರತದ ಆಟಗಾರರು

56 ಮುಹಮ್ಮದ್ ಶಮಿ

57 ಜಸ್‌ಪ್ರೀತ್ ಬುಮ್ರಾ

59 ಇರ್ಫಾನ್ ಪಠಾಣ್

 65 ಜಹೀರ್ ಖಾನ್

67 ಅಜಿತ್ ಅಗರ್‌ಕರ್

68 ಜಾವಗಲ್ ಶ್ರೀನಾಥ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News