ಕೆ.ಸಿ.ಎಫ್ ಮದೀನಾ ಮುನವ್ವರ ಝೋನ್ ಹಂತದ ಎಂಆರ್ಎಫ್ 2019-20 ಮರುಚಾಲನೆ

Update: 2019-07-07 18:49 GMT

ಸೌದಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಸೌದಿ ಅರೇಬಿಯಾ ಇದರ ಮದೀನಾ ಮುನವ್ವರ ಝೋನ್ ಹಂತದ ಎಂಆರ್ಎಫ್ ಸಾಂತ್ವನ ನಿಧಿ ಯೋಜನೆಯ ಕಾರ್ಯಕ್ರಮ ಮದೀನಾದ ಕೆ.ಸಿ.ಎಫ್ ಭವನದಲ್ಲಿ ಇಂದು ನಡೆಯಿತು. 

ಕಾರ್ಯಕ್ರಮವನ್ನು ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೌದಿ ರಾಷ್ಟ್ರೀಯ ಸಾಂತ್ವನ ಇಲಾಖೆ ಕನ್ವೀನರ್ ಅಶ್ರಫ್ ಹಾಜಿ ಕಿನ್ಯ ಮಾತನಾಡಿ ಎಂಆರ್ಎಫ್ ಪ್ರಾರಂಭಿಸಿ ವರ್ಷ ಯೋಜನೆಯ ಫಲಾನುಭವಿಗಳಿಗೆ ಆರ್ಥಿಕವಾಗಿ ಸಹಾಯ, ಎಂಆರ್ಎಫ್ ಸದಸ್ಯರ ಮರಣ ಸಂಭವಿಸಿದಾಗ ಅವರ ಕುಟುಂಬಕ್ಕೆ ಅರ್ಥಿಕ ಸಹಾಯ ತಳುಪಿಸಲು ಸಾಧ್ಯವಾಗಿದ್ದು, 2019-20ಸಾಲಿನ ಎಂಆರ್ಎಫ್ ಯೋಜನೆಗೆ ಸೌದಿಯ ವಿವಿಧ ಕಡೆಗಳಲ್ಲಿ ಇಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.

ಎಂಆರ್ಎಫ್ ಗುರುತಿನ ಚೀಟಿಯನ್ನು ಮದೀನಾ ಸೆಕ್ಟರ್ ಕೋಶಾಧಿಕಾರಿ ಸುಲೈಮಾನ್ ತುರ್ಕಳಿಕೆಯರಿಗೆ ನೀಡುವ ಮೂಲಕ ಮದೀನಾ ಝೋನ್ ಹಂತದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ಸಾಂತ್ವನ ವಿಭಾಗದ ಕನ್ವಿನರ್ ಅಬ್ದುಲ್ ಜಬ್ಬಾರ್ ಕಾವಳಕಟ್ಟೆ, ಸಲಾಮ್ ಆತೂರು, ಸಿದ್ದೀಕ್ ಕನ್ಯಾನ, ಆಸಿಫ್ ಬದ್ಯಾರ್ ಸಹಿತ ಸೆಕ್ಟರ್, ಝೋನ್ ಸಮಿತಿಯ ನಾಯಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಕೆ‌.ಸಿ‌.ಎಫ್ ಮದೀನಾ ಝೋನ್ ಇದರ ಪ್ರಧಾನ ಕಾರ್ಯದರ್ಶಿ ಹುಸೈನಾರ್ ಮಾಪಲ್ ಸ್ವಾಗತಿಸಿ, ಸೆಕ್ಟರ್ ಕಾರ್ಯದರ್ಶಿ ಅಶ್ರಫ್ ನ್ಯಾಷನಲ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News