ತಾಹಿರ್, ಡುಮಿನಿ ಏಕದಿನ ಕ್ರಿಕೆಟ್‌ಗೆ ವಿದಾಯ

Update: 2019-07-07 18:55 GMT

ಲಂಡನ್, ಜು.7: ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಜಯ ಗಳಿಸಿದ್ದು, ಇದರ ಬೆನ್ನಿಗೆ ತಂಡದ ಹಿರಿಯ ಆಟಗಾರರಾದ ಜೆ.ಪಿ. ಡುಮಿನಿ ಮತ್ತು ಇಮ್ರಾನ್ ತಾಹಿರ್ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ವಿದಾಯ ಪ್ರಕಟಿಸಿದ್ದಾರೆ.

 ಕಳೆದ ಬಾರಿ ಆಫ್ರಿಕ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್ ತಲುಪುವಲ್ಲಿ ಆಫ್ರಿಕ ಎಡವಿದ್ದರೂ, ತಂಡ ಕೊನೆಯ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಸೋಲುಣಿಸಿದೆ. ಡುಮಿನಿ ಮತ್ತು ತಾಹಿರ್ ಗೆಲುವಿನೊಂದಿಗೆ ವಿದಾಯ ಹೇಳಿದ್ದಾರೆ.

  35ರ ಹರೆಯದ ಡುಮಿನಿ ಈ ಬಾರಿ ವಿಶ್ವಕಪ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. 5 ಪಂದ್ಯಗಳನ್ನು ಆಡಿದ್ದ ಅವರು ಶ್ರೀಲಂಕಾ ವಿರುದ್ಧ 45 ರನ್ ಗಳಿಸಿದ್ದರು. ಇದು ಈ ಬಾರಿ ವಿಶ್ವಕಪ್‌ನ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಕೊನೆಯ ಪಂದ್ಯದಲ್ಲಿ 14 ರನ್ ಗಳಿಸಿದ್ದರು. ಪಾಕಿಸ್ತಾನ ಮೂಲದ 40ರ ಹರೆಯದ ಸ್ಪಿನ್ನರ್ ತಾಹಿರ್ ಕಳೆದ ಪಂದ್ಯದಲ್ಲಿ 9 ಓವರ್‌ಗಳಲ್ಲಿ 59ಕ್ಕೆ 1 ವಿಕೆಟ್ ಪಡೆದಿದ್ದಾರೆ.

ಡುಮಿನಿ 199 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 36.81 ಸರಾಸರಿಯಂತೆ 5,117 ರನ್ ದಾಖಲಿಸಿದ್ದಾರೆ. ಶತಕ 4 ಮತ್ತು ಅರ್ಧಶತಕ 27 ತಾಹಿರ್ 107 ಏಕದಿನ ಪಂದ್ಯಗಳಲ್ಲ್ಲಿ 173 ವಿಕೆಟ್ ಪಡೆದಿದ್ದಾರೆ. 3 ಬಾರಿ 5 ವಿಕೆಟ್‌ಗಳನ್ನು ಮತ್ತು 7 ಬಾರಿ 4 ವಿಕೆಟ್‌ಗಳ ಗೊಂಚಲನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News