ಭಾರತ -ನ್ಯೂಝಿಲ್ಯಾಂಡ್ ಸೆಮಿಫೈನಲ್ ಮಳೆಗೆ ಬಲಿಯಾದರೆ ಏನಾಗುತ್ತೇ ?

Update: 2019-07-08 09:12 GMT

ಲಂಡನ್, ಜು.8: ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯ ಮಳೆಗೆ ಬಲಿಯಾದರೆ ಮುಂದೆ ಏನಾಗಬಹುದೆಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಿಗೆ ಇದ್ದೇ ಇರುತ್ತದೆ.

ಲೀಗ್ ಹಂತದಲ್ಲಿ ಮಳೆಯಿಂದ ಕೊಚ್ಚಿ ಹೋದ ಪಂದ್ಯಗಳಲ್ಲಿ ಉಭಯ ತಂಡಗ ಳಿಗೆ ತಲಾ 1 ಅಂಕಗಳನ್ನು ಹಂಚಿಕೊಳ್ಳುವ ಅವಕಾಶ ಇತ್ತು. ಭಾರತ-ನ್ಯೂಝಿಲ್ಯಾಂಡ್ ತಂಡಗಳ ನಡುವಿನ ಪಂದ್ಯವೂ ಈ ಹಿಂದೆ ಮಳೆಗೆ ಬಲಿಯಾಗಿ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆದಿದ್ದವು.

ಲೀಗ್ ಹಂತದಲ್ಲಿ ಪಂದ್ಯ ರದ್ದಾದರೆ, ಪಂದ್ಯವನ್ನು ಮತ್ತೆ ಆಯೋಜಿಸಲು ಮೀಸಲು ದಿನಗಳಿರಲಿಲ್ಲ. ಆದರೆ ಸೆಮಿಫೈನಲ್‌ಗೆ ಅಂತಹ ಸಮಸ್ಯೆ ಇಲ್ಲ. ಎರಡೂ ಸೆಮಿಗಳಿಗೂ ಐಸಿಸಿ ಮೀಸಲು ದಿನಗಳನ್ನು ನಿಗದಿಪಡಿಸಿದೆ.

ಮ್ಯಾಂಚೆಸ್ಟರ್‌ನ ನಲ್ಲಿ ಜುಲೈ 9ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಭಾರತ ತಂಡ ಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ನ್ಯೂಝಿಲ್ಯಾಂಡ್‌ನ್ನು ಎದುರಿಸಲಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ಜು.11ರಂದು ಎರಡನೇ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಆತಿಥೇಯ ಇಂಗ್ಲೆಂಡ್‌ನ ಸವಾಲು ಎದುರಾಗಲಿದೆ.

ಜು.9ರಂದು ಮೊದಲ ಸೆಮಿಫೈನಲ್ ನಡೆಯದಿದ್ದರೆ ಸೆಮಿಫೈನಲ್ 10ರಂದು ನಡೆಯಲಿದೆ. ಪಂದ್ಯಕ್ಕೆ ಮಧ್ಯದಲ್ಲಿ ಮಳೆಯಿಂದ ಅಡ್ಡಿಯಾದರೆ ಡಿಎಲ್ ನಿಯಮದ ಮೂಲಕ ತಂಡಕ್ಕೆ ಗೆಲುವಿನ ಗುರಿ ನೀಡಲಾಗುವುದು. ಒಂದು ವೇಳೆ ಈ ಎರಡೂ ದಿನಗಳಲ್ಲೂ ಸೆಮಿಫೈನಲ್ ಪಂದ್ಯ ನಡೆಯದಿದ್ದರೆ ಭಾರತ ಲೀಗ್ ಹಂತದಲ್ಲಿ ನ್ಯೂಝಿಲ್ಯಾಂಡ್‌ಗಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಕಾರಣದಿಂದಾಗಿ ನೇರವಾಗಿ ಫೈನಲ್‌ಗೇರಲಿದೆ. ಭಾರತ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು, ನ್ಯೂಝಿಲ್ಯಾಂಡ್ 11 ಅಂಕಳೊಂದಿಗೆ 4ನೇ ಸ್ಥಾನ ಪಡೆದಿದೆ.

2ನೇ ಸೆಮಿಫೈನಲ್ ಜು.11ರಂದು ರದ್ದಾದರೆ ಜು.12ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News