ಸರಕಾರದ ಉಳಿವಿಗಾಗಿ ರಾಜೀನಾಮೆ: ಯು.ಟಿ.ಖಾದರ್

Update: 2019-07-08 10:54 GMT

ಬೆಂಗಳೂರು, ಜು.8: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉಳಿಯಬೇಕು. ಯಾವ ಕಾರಣಕ್ಕೂ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಬಾರದು. ನಮ್ಮಿಂದಾಗಿ ಅತೃಪ್ತ ಶಾಸಕರು ಅಥವಾ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಮಸ್ಯೆಯಾಗಬಾರದು. ಈ ನಿಟ್ಟಿನಲ್ಲಿ ತನ್ನ ಸಹಿತ ಕಾಂಗ್ರೆಸ್‌ನ ಎಲ್ಲಾ ಸಚಿವರು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ರಾಜ್ಯ ನಗರಾಭಿವೃದ್ಧಿ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಸೋಮವಾರ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ರ ಮನೆಯಲ್ಲಿ ಏರ್ಪಡಿಸಲಾದ ಉಪಹಾರ ಕೂಟದಲ್ಲಿ ರಾಜೀನಾಮೆ ಸಲ್ಲಿಸುವ ಇಂಗಿತವನ್ನು ಎಲ್ಲ ಸಚಿವರು ಮುಂದಿಟ್ಟರು. ನಮಗೆ ಪಕ್ಷ ಮತ್ತು ರಾಜ್ಯದಲ್ಲಿ ಆಡಳಿತ ಮುಂದುವರಿಸುವುದು ಮುಖ್ಯ. ಅದಕ್ಕಾಗಿ ಯಾವ ತ್ಯಾಗ್ಕೂ ಸಿದ್ಧ. ಪಕ್ಷದ ಹಿರಿಯ ನಾಯಕರು ಅತೃಪ್ತ ಶಾಸಕರ ಮನವೊಲಿಕೆ ಮಾಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರವನ್ನು ನಾವು ನೀಡಿದ್ದೇವೆ. ಪಕ್ಷ ನಮ್ಮನ್ನು ಸಚಿವರಾಗಿ ಮುಂದುವರಿಯಲು ಸೂಚಿಸಿದರೆ ಅದನ್ನು ಪಾಲಿಸುವೆವು. ರಾಜೀನಾಮೆ ಸಲ್ಲಿಸಲು ಸೂಚಿಸಿದರೆ ಪಕ್ಷದ ಸಂಘಟನೆಗೂ ಸಿದ್ಧ. ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಶೀಘ್ರದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ನಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News