ಹಾಂಕಾಂಗ್ ಪ್ರತಿಭಟನೆ: 6 ಮಂದಿ ಬಂಧನ

Update: 2019-07-09 03:20 GMT

ಹಾಂಕಾಂಗ್, ಜು. 8: ಹಾಂಕಾಂಗ್‌ನ ಅತ್ಯಂತ ಜನಪ್ರಿಯ ಪ್ರವಾಸಿ ಕೇಂದ್ರವೊಂದರಲ್ಲಿ ರವಿವಾರ ನಡೆಯುತ್ತಿದ್ದ ಧರಣಿಯ ವೇಳೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಹಾಂಕಾಂಗ್‌ನಲ್ಲಿ ನೆಲೆಸಿರುವ ರಾಜಕೀಯ ಬಿಕ್ಕಟ್ಟನ್ನು ಮಾತೃಭೂಮಿ ಚೀನಾದಿಂದ ಬಂದ ಪ್ರವಾಸಿಗರ ಗಮನಕ್ಕೆ ತರುವುದಕ್ಕಾಗಿ ಸಾವಿರಾರು ಪ್ರದರ್ಶನಕಾರರು ಧರಣಿ ನಡೆಸುತ್ತಿದ್ದರು.

ಕೌಲೂನ್ ಉಪನಗರದ ರಸ್ತೆಗಳಲ್ಲಿ 2,30,000 ಜನರು ಮೆರವಣಿಗೆ ನಡೆಸಿದರು ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಆದರೆ, ಧರಣಿಯ ಉತ್ತುಂಗದಲ್ಲಿ 56,000 ಜನರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News