ಮ್ಯಾಂಚೆಸ್ಟರ್‌ನಲ್ಲಿ ಕಿವೀಸ್ ಮೊದಲ ಬಾರಿ ಫೈನಲ್‌ಗೆ

Update: 2019-07-11 03:32 GMT

   ಮ್ಯಾಂಚೆಸ್ಟರ್, ಜು.10: ನ್ಯೂಝಿಲ್ಯಾಂಡ್ ತಂಡ ಮ್ಯಾಂಚೆಸ್ಟರ್‌ನಲ್ಲಿ ಆಡಿರುವ ವಿಶ್ವಕಪ್ ಸೆಮಿಫೈನಲ್‌ಗಳ ಪೈಕಿ ಮೊದಲ ಬಾರಿ ಜಯ ಗಳಿಸಿ ಇದೀಗ ಫೈನಲ್ ಪ್ರವೇಶಿಸಿದೆ.

  ರನ್‌ರೇಟ್ ಆಧಾರದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಸೆಮಿಫೈನಲ್ ಪ್ರವೇಶಿಸಿದ್ದ ಕಿವೀಸ್ ಭಾರತದ ವಿರುದ್ಧ 18 ರನ್‌ಗಳ ಜಯ ಗಳಿಸಿ ಮ್ಯಾಂಚೆಸ್ಟರ್‌ನಲ್ಲಿ ಮೊದಲ ಬಾರಿ ಫೈನಲ್ ತಲುಪಿದೆ. 1979ರಲ್ಲಿ ಮೊದಲ ಬಾರಿ ಇಲ್ಲಿ ಆಡಿದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳ ಸೋಲು ಅನುಭವಿಸಿತ್ತು. 1999ರಲ್ಲಿ ಪಾಕಿಸ್ತಾನ ವಿರುದ್ಧ ಸೆಮಿಫೈನಲ್‌ನಲ್ಲಿ 9 ವಿಕೆಟ್‌ಗಳ ಅಂತರದಲ್ಲಿ ಸೋತು ನಿರ್ಗಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News