ಸೆರೆನಾ, ಜೊಕೊವಿಕ್ ಪೈನಲ್‌ಗೆ ಲಗ್ಗೆ

Update: 2019-07-12 19:01 GMT

ಲಂಡನ್, ಜು.12: ಶ್ರೇಯಾಂಕರಹಿತ ಬರ್ಬೊರ ಸ್ಟ್ರೈಕೋವಾರನ್ನು ನೇರ ಸೆಟ್‌ಗಳಿಂದ ಮಣಿಸಿದ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ 11ನೇ ಬಾರಿ ಫೈನಲ್ ತಲುಪಿದ್ದಾರೆ.

ಗುರುವಾರ ಇಲ್ಲಿನ ಸೆಂಟರ್‌ಕೋರ್ಟ್‌ನಲ್ಲಿ 59 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್ ಹಣಾಹಣಿಯಲ್ಲಿ ಸೆರೆನಾ ಝೆಕ್‌ನ ಸ್ಟ್ರೈಕೋವಾರನ್ನು 6-1, 6-2 ಸೆಟ್‌ಗಳಿಂದ ಸೋಲಿಸಿದರು.

ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಂಬಲ್ಡನ್ ಟೂರ್ನಿಯಲ್ಲಿ 8ನೇ ಪ್ರಶಸ್ತಿ ಜಯಿಸಲು ಇನ್ನೊಂದೇ ಮೆಟ್ಟ್ಟಿಲು ಏರಬೇಕಾಗಿದೆ. 37ರ ಹರೆಯದ ಸೆರೆನಾ ವೃತ್ತಿಪರ ಯುಗದಲ್ಲಿ ಗ್ರಾನ್‌ಸ್ಲಾಮ್ ಫೈನಲ್‌ಗೆ ತಲುಪಿದ ಅತ್ಯಂತ ಹಿರಿಯ ವಯಸ್ಸಿನ ಆಟಗಾರ್ತಿಯಾಗಿದ್ದಾರೆ. 24 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿ ದಾಖಲೆ ನಿರ್ಮಿಸಿರುವ ಮಾರ್ಗರೆಟ್ ಕೋರ್ಟ್ ದಾಖಲೆಯನ್ನು ಸರಿಗಟ್ಟಲು ಸೆರೆನಾಗೆ ಮತ್ತೊಂದು ಅವಕಾಶ ಲಭಿಸಿದೆ. ಸೆರೆನಾ ಕಳೆದ ವರ್ಷ ವಿಂಬಲ್ಡನ್ ಹಾಗೂ ಯು.ಎಸ್.ಓಪನ್ ಫೈನಲ್‌ನಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News