ಅಮೆರಿಕದಲ್ಲಿ ಮೊದಲ ಬಾಕ್ಸಿಂಗ್ ಸ್ಪರ್ಧೆಗೆ ವಿಜೇಂದರ್ ಸಜ್ಜು

Update: 2019-07-12 19:13 GMT

ನ್ಯೂಯಾರ್ಕ್, ಜು.12: ಭಾರತೀಯ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಬಾಕ್ಸಿಂಗ್ ರಿಂಗ್‌ಗೆ ವಾಪಸಾಗುತ್ತಿದ್ದು, ಶನಿವಾರ ನಡೆಯುವ 8 ಸುತ್ತಿನ ಸೂಪರ್‌ಮಿಡ್ಲ್ ವೇಟ್ ಸ್ಪರ್ಧೆಯಲ್ಲಿ ಅಮೆರಿಕದ ಮೈಕ್ ಸ್ನೈಡರ್‌ರನ್ನು ಎದುರಿಸಲಿದ್ದಾರೆ.

ಡಬ್ಲುಬಿಒ ಓರಿಯಂಟಲ್ ಹಾಗೂ ಏಶ್ಯ ಪೆಸಿಫಿಕ್ ಸೂಪರ್ ಮಿಡ್ಲ್ ವೇಟ್ ಚಾಂಪಿಯನ್ ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಈತನಕ ಆಡಿರುವ 10 ಪಂದ್ಯಗಳನ್ನು(7 ನಾಕೌಟ್)ಗೆದ್ದುಕೊಂಡಿದ್ದಾರೆ.

   ‘‘ನನ್ನ ಪ್ರಕಾರ ಇದೊಂದು ಉತ್ತಮ ಪ್ರದರ್ಶನವಾಗಲಿದೆ. ನಾನು ನನ್ನ ಬಾಕ್ಸಿಂಗ್ ವೃತ್ತಿಜೀವನದತ್ತ ಹೆಚ್ಚು ಗಮನ ನೀಡುವೆ. ಈ ವರ್ಷ ಇನ್ನೆರಡು ಬಾರಿ ಹೋರಾಟ ನಡೆಸಲು ಬಯಸಿರುವೆ. ವಿಶ್ವ ಪ್ರಶಸ್ತಿ ಜಯಿಸುವ ಅವಕಾಶಕ್ಕಾಗಿ ಕಾರ್ಯೋನ್ಮುಖವಾಗುತ್ತೇನೆ. ಮೈಕ್ ಸ್ನೈಡರ್ ವಿರುದ್ಧ ರೂಪಿಸಿರುವ ರಣತಂತ್ರದ ಕುರಿತು ಟ್ರೈನರ್ ಲೀ ಬಿಯರ್ಡ್ ಸಹಿತ ನನ್ನ ತಂಡದೊಂದಿಗೆ ಚರ್ಚಿಸಿದ್ದೇನೆ. ಆರಂಭಿಕ ಸುತ್ತಿನಲ್ಲೇ ಸ್ನೈಡರ್‌ರನ್ನು ಕೆಡವಿಹಾಕಲು ಸಜ್ಜಾಗಿದ್ದೇನೆ’’ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ವಿಜೇಂದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News