ಲಿಫ್ಟರ್ ಅಜಯ್ ಸಿಂಗ್ ನೂತನ ದಾಖಲೆ

Update: 2019-07-12 19:14 GMT

ಅಪಿಯಾ, ಜು.12: ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಚಿನ್ನದ ಪದಕವನ್ನು ಬಾಚಿಕೊಂಡ ಭಾರತದ ವೇಟ್‌ಲಿಫ್ಟರ್ ಅಜಯ್ ಸಿಂಗ್ ಕ್ಲೀನ್ ಹಾಗೂ ಜರ್ಕ್ ವಿಭಾಗದಲ್ಲಿ ನೂತನ ಕಾಮನ್‌ವೆಲ್ತ್ ದಾಖಲೆಯನ್ನು ನಿರ್ಮಿಸಿದರು.

81 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿರುವ 22ರ ಹರೆಯದ ಅಜಯ್ ತನ್ನ ದೇಹತೂಕಕ್ಕಿಂತ ಎರಡು ಪಟ್ಟು ಹೆಚ್ಚು(190ಕೆಜಿ)ತೂಕ ಎತ್ತಿಹಿಡಿಯುವ ಮೂಲಕ ಕ್ಲೀನ್ ಹಾಗೂ ಜರ್ಕ್‌ನಲ್ಲಿ ರಾಷ್ಟ್ರೀಯ ದಾಖಲೆ ಮುರಿದರು.

ಏಶ್ಯನ್ ಯೂತ್ ಹಾಗೂ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ಹಿಂದೆ ಕಂಚಿನ ಪದಕವನ್ನು ಜಯಿಸಿರುವ ಅಜಯ್ ಒಟ್ಟು 338 ಕೆಜಿ ತೂಕ ಎತ್ತಿಹಿಡಿದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಚೀನಾದಲ್ಲಿ ಎಪ್ರಿಲ್‌ನಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 320 ಕೆಜಿ ತೂಕ ಎತ್ತಿಹಿಡಿದಿದ್ದ ಅಜಯ್ ಇದೀಗ ಹಿಂದಿಗಿಂತ 20 ಕೆಜಿ ಹೆಚ್ಚು ಭಾರ ಎತ್ತಿಹಿಡಿದಿದ್ದಾರೆ.

221ಕೆಜಿ(100+121ಕೆಜಿ)ತೂಕ ಎತ್ತಿಹಿಡಿದಿರುವ ಪಿ.ಅನುರಧ ಪುರುಷರ 87 ಕೆಜಿ ತೂಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಕಾಮನ್‌ವೆಲ್ತ್ ಚಾಂಪಿಯನ್ ಆರ್.ವಿ.ರಾಹುಲ್ 89ಕೆಜಿ ಸ್ಪರ್ಧೆಯಲ್ಲಿ 325ಕೆಜಿ(145+180ಕೆಜಿ)ಎತ್ತಿ ಹಿಡಿದು 2ನೇ ಸ್ಥಾನಕ್ಕೆ ತೃಪ್ತಿಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News