ಜಲ ಜಾಗೃತಿಗಾಗಿ ಬೀದಿ ನಾಟಕ

Update: 2019-07-14 16:35 GMT

ಬೆಂಗಳೂರು, ಜು.14: ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ತಲೆದೂರಿರುವ ನೀರಿನ ಅಭಾವ ಹಾಗೂ ಇರುವ ನೀರನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ರಂಗಕಲಾವಿದ ಅರವಿಂದ್ ನಿರ್ದೇಶನದಲ್ಲಿ ನಗರದ ಲಾಲ್‌ಬಾಗ್‌ನಲ್ಲಿ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಮಳೆಗಾಲದಲ್ಲೂ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೆ ಕೆರೆ, ನದಿಗಳಲ್ಲಿ ನೀರಿಲ್ಲ. ಅಂತರ್‌ಜಲದ ಮಟ್ಟ ಪಾತಾಳಕ್ಕೆ ಹೋಗಿದೆ. ಇದರಿಂದ ಕುಡಿಯಲು ನೀರು, ಜಾನುವಾರಿಗಳು ಮೇವು ಹಾಗೂ ಕೃಷಿ ಮಾಡಲು ಸಾಧ್ಯವಾಗದೆ ಇಡೀ ದೇಶ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಇಂತಹ ಸಮಯದಲ್ಲಿ ಇರುವ ಅಲ್ಪ ಪ್ರಮಾನದ ನೀರನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು. ಮಳೆ ನೀರನ್ನು ಸಂಗ್ರಹಿಸುವುದು ಹೇಗೆ ಹಾಗೂ ಅನಗತ್ಯ ನೀರಿನ ವ್ಯಯವನ್ನು ನಿಲ್ಲಿಸುವುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರ್ ನೀರಿಲ್ಲ ಎಂಬ ಶೀರ್ಷಿಕೆಯಡಿ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ನೀರಿನ ಕುರಿತು ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ಬೀದಿ ನಾಟಕ ಮಾಡುವ ಉದ್ದೇಶವಿದೆ. ಇದಕ್ಕೆ ಜನತೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಇಡೀ ಬೆಂಗಳೂರು ಜನತೆ ಒಟ್ಟಾಗಿ ತಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳುವುದು ಹಾಗೂ ಆ ನೀರನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂಬುದು ನಮ್ಮ ಅಶಯವಾಗಿದೆ ಎಂದು ನಿರ್ದೇಶಕ ಅರವಿಂದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News