ಐದನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆದ ನೋವಾಕ್ ಜೊಕೊವಿಚ್

Update: 2019-07-14 18:48 GMT

ಲಂಡನ್(ಜು.14): ವಿಂಬಲ್ಡನ್ ಟೂರ್ನಿಯ ರೋಚಕ ಹಣಾಹಣಿಯಲ್ಲಿ ನೋವಾಕ್ ಜೊಕೊವಿಚ್ ಜಯಗಳಿಸಿದ್ದು ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಫೈನಲ್ ಪಂದ್ಯದಲ್ಲಿ ದಿಗ್ಗಜ ರೋಜರ್ ಫೆಡರರ್ ರನ್ನು ಮಣಿಸಿದ ಜೊಕೊವಿಚ್ 16ನೇ ಗ್ರ್ಯಾಂಡ್ ಸ್ಲಂ ಪ್ರಶಸ್ತಿಗೆ ಮುತ್ತಿಕ್ಕಿದರು. 

ಸುಮಾರು 4 ಗಂಟೆಗೂ ಹೆಚ್ಚು ಕಾಲ ನಡೆದ ರೋಚಕ ಕದನದಲ್ಲಿ 7-6, 1-6, 7-6, 4-6, 13-12 ಅಂತರದಲ್ಲಿ ಫೆಡರರ್ ರನ್ನು ನೋವಾಕ್ ಜೋಕೊವಿಚ್ ಮಣಿಸಿದರು. ಈ ಸೋಲಿನೊಂದಿಗೆ ಫೆಡರರ್ ರ 21ನೇ ಗ್ರ್ಯಾಂಡ್ ಸ್ಲಂ ಗೆಲುವಿನ ಕನಸು ನುಚ್ಚು ನೂರಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News