ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

Update: 2019-07-15 12:31 GMT

ಯುಎಇ, ಜು.15: ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಯುಎಇ ರಾಷ್ಟ್ರೀಯ ಸಮಿತಿ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದುಬೈ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಹಿರಿಯ ವಿದ್ವಾಂಸ ಸಯ್ಯಿದ್ ತ್ವಾಹ ಭಾಪಖಿ ತಂಙಳ್ ಪ್ರಾರ್ಥನೆ ನಡೆಸಿ, ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು ವಾರ್ಷಿಕ ವರದಿ ವಾಚಿಸಿ, ಡಿವಿಷನ್ ವರದಿ ಗಳನ್ನು ಆಯಾ ವಿಭಾಗದ ಕಾರ್ಯದರ್ಶಿಗಳು ವಾಚಿಸಿದರು.

ಕೋಶಾಧಿಕಾರಿ ಜಲೀಲ್ ನಿಝಾಮಿ ಎಮ್ಮೆಮಾಡು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಬಳಿಕ ಕೆಸಿಎಫ್ ಅಂತರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಪಿಎಂಎಚ್ ಈಶ್ವರಮಂಗಳ ಹಾಗೂ ಚುನಾವಣಾಧಿಕಾರಿ, ಅಂತಾರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಳ್ಮಾರ್ ಒಮಾನ್ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಝಾಮಿ, ಪ್ರ.ಕಾರ್ಯದರ್ಶಿಯಾಗಿ ಮೂಸ ಹಾಜಿ ಬಸರ, ಕೋಶಾಧಿಕಾರಿಯಾಗಿ ಇಬ್ರಾಹಿಮ್ ಬ್ರೈಟ್ ಮಾರ್ಬಲ್ ನೇಮಕಗೊಂಡರು.

ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಕಾಜೂರ್, ಕಾರ್ಯದರ್ಶಿಯಾಗಿ ಕಲಂದರ್ ಕಬಕ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಇಬ್ರಾಹಿಮ್ ಸಖಾಫಿ ಕೆದುಂಬಾಡಿ, ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಸಖಾಫಿ ಮಾದಾಪುರ, ವೆಲ್ಫೇರ್ ವಿಭಾಗ ಅಧ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ, ಕಾರ್ಯದರ್ಶಿಯಾಗಿ ಅಬ್ದುಲ್ ರಹೀಮ್ ಕೋಡಿ, ಆಡಳಿತ ವಿಭಾಗ ಅಧ್ಯಕ್ಷರಾಗಿ ಶಾಫೀ ಸಖಾಫಿ ಕೊಂಡಂಗೇರಿ, ಕಾರ್ಯದರ್ಶಿಯಾಗಿ ರಫೀಕ್ ಕಲ್ಲಡ್ಕ, ಇಹ್ಸಾನ್ ವಿಭಾಗ ಅಧ್ಯಕ್ಷರಾಗಿ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಅದಿ ಸುಳ್ಯ, ಪಬ್ಲಿಕೇಷನ್ ವಿಭಾಗ ಅಧ್ಯಕ್ಷರಾಗಿ ಅಬ್ದುಲ್ ಕರೀಮ್ ಮುಸ್ಲಿಯಾರ್ ಉರುವಾಲು ಪದವು, ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಮ್ ತುರ್ಕಳಿಕೆ ಆಯ್ಕೆಯಾದರು.

ಕೆಸಿಎಫ್ ಅಂತಾರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ನೂತನ ಸಮಿತಿಗೆ ದಾಖಲೆ ಹಾಗೂ ಲೆಕ್ಕ ಪತ್ರಗಳನ್ನು ಹಸ್ತಾಂತರಿಸಲಾಯಿತು. ಝೈನುದ್ದೀನ್ ಹಾಜಿ ಬೆಳ್ಳಾರೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ಹಾಜಿ ಮೂಸಾ ಬಸರ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News