ಶ್ರೀಲಂಕಾ ಚರ್ಚ್ ಗಳಲ್ಲಿ ಸ್ಫೋಟಗಳನ್ನು ನಡೆಸಿದ್ದು ಮಾದಕದ್ರವ್ಯ ಜಾಲಗಳು: ಅಧ್ಯಕ್ಷ ಮೈತ್ರಿಪಾಲ ಸಿರಿಸೇನ

Update: 2019-07-15 15:28 GMT

ಕೊಲಂಬೊ, ಜು.15: ಶ್ರೀಲಂಕಾದಲ್ಲಿ ನಡೆದ ಈಸ್ಟರ್ ರವಿವಾರದ ಸರಣಿ ಬಾಂಬ್ ಸ್ಫೋಟಗಳನ್ನು ಅಂತರ್‌ರಾಷ್ಟ್ರೀಯ ಮಾದಕ ದ್ರವ್ಯ ಜಾಲಗಳು ಸಂಘಟಿಸಿವೆ ಎಂದು ಆ ದೇಶದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಸೋಮವಾರ ಹೇಳಿದ್ದಾರೆ.

ಇದಕ್ಕೂ ಮೊದಲು ಈ ದಾಳಿಗಳನ್ನು ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್ ಮಾಡಿತ್ತು ಎಂಬುದಾಗಿ ಶ್ರೀಲಂಕಾ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಶ್ರೀಲಂಕಾದಾದ್ಯಂತ ನಡೆಯುತ್ತಿರುವ ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆಯ ನಡುವೆಯೇ ಶ್ರೀಲಂಕಾ ಅಧ್ಯಕ್ಷರ ಈ ಹೇಳಿಕೆ ಹೊರಬಿದ್ದಿದೆ. ಎಪ್ರಿಲ್ 21ರಂದು ನಡೆದ ಎಂಟು ಸರಣಿ ಸ್ಫೋಟಗಳಲ್ಲಿ 290 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬಾಂಬ್ ದಾಳಿಗಳು ‘‘ಅಂತರ್‌ರಾಷ್ಟ್ರೀಯ ಮಾದಕ ದ್ರವ್ಯ ಮಾರಾಟಗಾರರ ಕೃತ್ಯವಾಗಿತ್ತು’’ ಎಂದು ಸೋಮವಾರ ಅಧ್ಯಕ್ಷರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸಿರಿಸೇನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News