ರೆಸಾರ್ಟ್ ನಲ್ಲಿ ಶಾಸಕರ ಜೊತೆ ಬಿಎಸ್‌ವೈ ಬ್ಯಾಟಿಂಗ್
Update: 2019-07-16 20:45 IST
ಬೆಂಗಳೂರು, ಜು.16: ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರಕಾರ ರಚನೆ ಉತ್ಸಾಹದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೆಸಾರ್ಟ್ ನಲ್ಲಿ ಶಾಸಕರ ಜೊತೆ ಕ್ರಿಕೆಟ್ ಆಟವಾಡಿ ಸಂಭ್ರಮಿಸಿದರು.
ಯಡಿಯೂರಪ್ಪ ಬ್ಯಾಟಿಂಗ್ ಮಾಡಿದರೆ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಕೀಪರ್ ಆಗಿದ್ದರು. ಬಿಎಸ್‌ವೈ ಆಪ್ತ ಹೊನ್ನಳ್ಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ, ಸೋಮಶೇಖರ ರೆಡ್ಡಿ ಸೇರಿ ಇನ್ನಿತರರು ಸಾಥ್ ನೀಡಿದರು.