ಆರೋಹಣ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Update: 2019-07-16 15:27 GMT

ಬೆಂಗಳೂರು, ಜು.16: ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಅಥವಾ ಅನ್ವೇಷಣೆ ಮಾಡಿದವರಿಗೆ ನೀಡುವ ಪ್ರತಿಷ್ಠಿತ ಆರೋಹಣ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದೇಶದ ಮೂಲೆ ಮೂಲೆಯಲ್ಲಿರುವ ಜನ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಪ್ರತಿಷ್ಠಾನವು ನಿರಂತರವಾಗಿ ಗಮನಿಸುತ್ತಿದೆ. ಅವುಗಳಿಗೆ ಪರಿಹಾರೋಪಾಯ ತೋರುವ, ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕಿಳಿಸುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತದೆ.

ಸಾಮಾಜಿಕವಾಗಿ ಹಿಂದುಳಿದ ಪ್ರದೇಶ, ಸಮುದಾಯಗಳಿಗೆ ಪರಿಹಾರ ಕಲ್ಪಿಸಿಕೊಟ್ಟ ವ್ಯಕ್ತಿ, ತಂಡ ಅಥವಾ ಸರಕಾರೇತರ ಸಂಘಟನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. 1.5 ಕೋಟಿ ರೂ.ಮೊತ್ತದ ಆರೋಹಣ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೋಮವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆ.30 ರೊಳಗೆ 18 ವರ್ಷ ದಾಟಿದ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಯೊಂದಿಗೆ ಆವಿಷ್ಕಾರದ ಮಾದರಿ ಮತ್ತು ವಿಡಿಯೊವನ್ನು ಕಳುಹಿಸಬೇಕು. ಪರಿಣತರ ತಂಡ ಇವುಗಳನ್ನು ಪರಿಶೀಲಿಸಿ, 50 ಮಾದರಿಗಳನ್ನು ಆರಿಸಲಾಗುವುದು. ಬಳಿಕ ಅಂತಿಮ ತೀರ್ಪುಗಾರರು 30 ಮಾದರಿ ಅಥವಾ ಅನ್ವೇಷಣೆಗಳನ್ನು ಆಯ್ಕೆ ಮಾಡುತ್ತಾರೆ. ಅರ್ಜಿ ಸಲ್ಲಿಕೆ ಹಾಗೂ ಮಾಹಿತಿಗಾಗಿ ಪ್ರತಿಷ್ಠಾನದ ವೆಬ್‌ಸೈಟ್ www.infosys.com/aarohan ಗೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News