ಯುಪಿ ಯೋಧಾಗೆ ನಿತೀಶ್ ಕುಮಾರ್ ನಾಯಕ

Update: 2019-07-16 18:49 GMT

ಹೊಸದಿಲ್ಲಿ, ಜು.16: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಜು.20ರಿಂದ ಆರಂಭವಾಗಲಿದ್ದು, ಯುವ ಡಿಫೆಂಡರ್ ನಿತೀಶ್ ಕುಮಾರ್ ಯುಪಿ ಯೋಧಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.

‘‘ಯುಪಿ ಯೋಧಾ ತಂಡ ಉತ್ತರಪ್ರದೇಶದ ಯೋಧರ ಸ್ಫೂರ್ತಿಯ ಸೆಳೆತಕ್ಕೆ ಒಳಗಾಗಿದೆ. ಆಟಗಾರರು ಯುದ್ದರಂಗದಲ್ಲಿ ತಮ್ಮ ರಕ್ತ, ಬೆವರು ಹಾಗೂ ಕಣ್ಣೀರನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ. ನಿತೀಶ್ ಕುಮಾರ್ ಈ ಬಾರಿಯ ಲೀಗ್‌ನ ನಾಯಕನಾಗಿದ್ದಾರೆ’’ ಎಂದು ಟೀಮ್ ಯುಪಿ ಯೋಧಾ ತಂಡ ತಿಳಿಸಿದೆ.

ಗ್ರೇಟರ್ ನೊಯ್ಡ ಮೂಲದ ಫ್ರಾಂಚೈಸಿ ಪಿಕೆಎಲ್‌ನ ಐದನೇ ಆವೃತ್ತಿಯಲ್ಲಿ ಚೊಚ್ಚಲ ಪಂದ್ಯ ಆಡಿತ್ತು. ತಾನಾಡಿರುವ ಕಳೆದ 2 ಆವೃತ್ತಿಯ ಲೀಗ್‌ನಲ್ಲಿ ಮೂರನೇ ಸ್ಥಾನ ಪಡೆದಿದೆ.

ಯುಪಿ ಯೋಧಾ ತಂಡ ಜು.24 ರಂದು ಹೈದರಾಬಾದ್‌ನಲ್ಲಿ ಬಂಗಾಳ ವಾರಿಯರ್ಸ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News