ಇಂಗ್ಲೆಂಡ್ ಸ್ಪಿನ್ಸ್ ಸಲಹೆಗಾರನಾಗಿ ಮುಷ್ತಾಕ್ ಮುಂದುವರಿಕೆ

Update: 2019-07-16 18:53 GMT

ಕರಾಚಿ, ಜು.16: ಇಂಗ್ಲೆಂಡ್ ವಿಶ್ವಕಪ್ ವಿಜೇತ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದ ಪಾಕಿಸ್ತಾನದ ಸ್ಪಿನ್ ದಂತಕತೆ ಸಕ್ಲೇನ್ ಮುಷ್ತಾಕ್ ಇನ್ನೂ 55 ದಿನಗಳ ಕಾಲ ತಂಡದ ಸ್ಪಿನ್ ಸಲಹೆಗಾರನಾಗಿ ಮುಂದುವರಿಯುವಂತೆ ಸೂಚಿಸಲಾಗಿದೆ. ಹೀಗಾಗಿ ಅವರು ಇಡೀ ಆ್ಯಶಸ್ ಸರಣಿಯಲ್ಲಿ ತಂಡದೊಂದಿಗೆ ಇರಲಿದ್ದಾರೆ.

‘‘ನಾನು ಇಂಗ್ಲೆಂಡ್ ತಂಡದೊಂದಿಗೆ ಸ್ಪಿನ್ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅತ್ಯಂತ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿರುವುದನ್ನು ನೋಡಲು ಖುಷಿಯಾಯಿತು. ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಹಾಗೂ ಆಟಗಾರರ ಶ್ರಮದಿಂದ ಇದು ಸಾಧ್ಯವಾಗಿದೆ’’ ಎಂದು 42ರ ಹರೆಯದ ಮಾಜಿ ಆಫ್ ಸ್ಪಿನ್ನರ್ ಮುಷ್ತಾಕ್ ಹೇಳಿದರು.

ಮುಷ್ತಾಕ್ ಪಾಕ್ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 496 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ತನಕ ಪಾಕಿಸ್ತಾನ ತಂಡದೊಂದಿಗೆ ಕೆಲಸ ಮಾಡಿಲ್ಲ.

 ‘‘ಪಾಕಿಸ್ತಾನ ಕ್ರಿಕೆಟ್ ಮಂಡಳಿ ನನ್ನನ್ನು ಸಂಪರ್ಕಿಸಿದರೆ, ಪಾಕ್ ತಂಡದೊಂದಿಗೆ ಕೆಲಸ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ಯಶಸ್ಸು ಸಾಧಿಸಲು ಕಳೆದ ಕೆಲವು ವರ್ಷಗಳಿಂದ ಕಠಿಣ ಶ್ರಮಪಟ್ಟಿದೆ. ಇಂಗ್ಲೆಂಡ್ ಆಟಗಾರರು ಆತ್ಮೀಯರಾಗಿದ್ದು, ಪರಸ್ಪರ ಸಹಾಯಕ್ಕೆ ಮುಂದಾಗುತ್ತಾರೆ’’ಎಂದು ವೆಸ್ಟ್‌ಇಂಡೀಸ್ ತಂಡ ವಿಶ್ವ ಟಿ-20 ಕಪ್ ಗೆದ್ದ ಸಂದರ್ಭದಲ್ಲಿ ಆ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದ ಸಕ್ಲೇನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News