ಎಂವಿಜೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಪ್ಲಾಟ್‌ಫಾರಂ ಸ್ವಚ್ಛಗೊಳಿಸುವ ಯಂತ್ರ ಆವಿಷ್ಕಾರ

Update: 2019-07-17 17:19 GMT

ಬೆಂಗಳೂರು, ಜು.17: ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬಸ್ ನಿಲ್ದಾಣ, ಆವರಣ, ಕಟ್ಟಡಗಳ ಪ್ಲಾಟ್‌ಫಾರಂಗಳನ್ನು ಸ್ವಚ್ಛಗೊಳಿಸುವ ಕ್ಲೀನಿಂಗ್ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ.

ಎಂವಿಜೆ ಕಾಲೇಜಿನ ಸತೀಶ್ ಕುಮಾರ್, ಪವನ್ ಕಲ್ಯಾಣ್ ಆರ್.ಎಸ್. ಶ್ರೀಶ್ ವಿ ಐಯ್ಯರ್ ಮತ್ತು ಸಪ್ತಾಂಗ್ಸು ಬಾನಿಕ್ ವಿದ್ಯಾರ್ಥಿಗಳು ಪ್ಲಾಟ್‌ಫಾರಂ ಯಂತ್ರವನ್ನು ವಿನ್ಯಾಸಗೊಳಿಸಿದ್ದು, ಹೆಚ್ಚು ವಿದ್ಯುತ್ತನ್ನು ಬಳಸದೆ, ಸೀಮಿತ ತಂತ್ರಜ್ಞಾನದ ನೆರವಿನಿಂದ ಪ್ಲಾಟ್‌ಫಾರಂಗಳನ್ನು ಸ್ವಚ್ಛಗೊಳಿಸಬಹುದಾಗಿದೆ.

ಪಿಸಿಎಸ್(ಪ್ಲಾಟ್‌ಫಾರಂ ಕ್ಲೀನಿಂಗ್ ಸಿಸ್ಟಮ್) ವಿನ್ಯಾಸದಲ್ಲಿ ಸಾಂದ್ರತೆ, ಸುಲಭವಾದ ಬಳಕೆ, ಸಾರ್ವತ್ರಿಕ ಶ್ರೇಣಿಯ ಅಪ್ಲಿಕೇಷನ್‌ಗಳನ್ನು ಇದು ಒಳಗೊಂಡಿದೆ. ಇದು ಅತ್ಯಂತ ಶುಭ್ರವಾಗಿ ಸ್ವಚ್ಛಗೊಳಿಸುವ ಕಾರ್ಯ ದಕ್ಷತೆಯನ್ನು ಹೊಂದಿದೆ, ಸ್ವಚ್ಛಗೊಳಿಸುವ ಪ್ರಕ್ರಿಯೆ ಕೂಡ ಸುಲಭ, ಸುಲಭ ಕಾರ್ಯಾಚರಣೆ ಹಾಗೂ ಪರಿಸರ ಸ್ನೇಹಿಯಾಗಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News