ಚರ್ಮ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇಯಾನ್ ಚಾಪೆಲ್

Update: 2019-07-19 05:11 GMT

ಮೆಲ್ಬೋರ್ನ್, ಜು.18: ತಾನು ಚರ್ಮ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಆಸ್ಟ್ರೇಲಿಯದ ಮಾಜಿ ನಾಯಕ ಇಯಾನ್ ಚಾಪೆಲ್ ಗುರುವಾರ ಬಹಿರಂಗಪಡಿಸಿದರು. ಮುಂದಿನ ತಿಂಗಳು ಆರಂಭವಾಗಲಿರುವ ಪ್ರತಿಷ್ಠಿತ ಆ್ಯಶಸ್ ಸರಣಿ ವೇಳೆ ತಾನು ಸಂಪೂರ್ಣ ಫಿಟ್ ಇರುವ ನಿರೀಕ್ಷೆಯಲ್ಲಿದ್ದೇನೆ ಎಂದು 75ರ ಹರೆಯದ ಚಾಪೆಲ್ ಹೇಳಿದ್ದಾರೆ. ಚಾಪೆಲ್ 1964 ಹಾಗೂ 1980 ನಡುವೆ ಆಸ್ಟ್ರೇಲಿಯದ ಪರ 75 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರ ಭುಜ, ಕುತ್ತಿಗೆ ಹಾಗೂ ಕಂಕುಳಲ್ಲಿ ಚರ್ಮ ಕ್ಯಾನ್ಸರ್ ತೆಗೆದ ಬಳಿಕ ಐದು ವಾರಗಳ ಕಾಲ ರೇಡಿಯೇಶನ್ ಥೆರಪಿಗೆ ಒಳಪಟ್ಟಿದ್ದಾರೆ. ‘‘ಈ ಹಂತದಲ್ಲಿ ಲಭಿಸಿರುವ ಪ್ಯಾಥೊಲಜಿ ವರದಿಗಳೆಲ್ಲವೂ ಸ್ಪಷ್ಟವಾಗಿವೆ. ಆಗಸ್ಟ್ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾಗವಹಿಸಲು ಸಿದ್ಧನಾಗಿರುವೆ’’ ಎಂದು ಟೆಸ್ಟ್‌ನಲ್ಲಿ5,345 ರನ್ ಗಳಿಸಿರುವ ಚಾಪೆಲ್ ಹೇಳಿದ್ದಾರೆ. ರೇಡಿಯೋಥೆರಪಿ ವೇಳೆ ತನ್ನ ಕೆಲಸವನ್ನು ಮುಂದುವರಿಸಿರುವ ಚಾಪೆಲ್ ಕಳೆದ ವಾರ ಸಹೋದರರಾದ ಗ್ರೆಗ್ ಹಾಗೂ ಟ್ರೆವರ್‌ರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News