ವಿಶ್ವಾಸ ಮತಯಾಚನೆ: ರಾಜ್ಯಪಾಲರ ಎರಡನೇ ಗಡುವು ಮೀರಿದ ಸರಕಾರ

Update: 2019-07-19 13:25 GMT

ಬೆಂಗಳೂರು, ಜು.19: ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ಸಿಎಂಗೆ ಸೂಚಿಸಿದ್ದ ರಾಜ್ಯಪಾಲ ವಜುಭಾಯಿ ವಾಲಾ ಅವರ ಮರುವಿಜ್ಞಾಪನೆಯ ಸಮಯ ಮೀರಿದ್ದು, ಇನ್ನೂ ಕೂಡಾ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆದಿಲ್ಲ. ಈ ಮೂಲಕ ರಾಜ್ಯಪಾಲರು ನೀಡಿದ್ದ ಎರಡನೇ ಗಡುವನ್ನು ಸರಕಾರ ಮೀರಿದೆ.

ರಾಜ್ಯಪಾಲರು ಇಂದು ಮಧ್ಯಾಹ್ನ 1:30ಕ್ಕೆ ವಿಶ್ವಾಸ ಮತ ಯಾಚನೆಗೆ ನಿರ್ದೇಶಿಸಿದ್ದರು. ಆದರೆ ಚರ್ಚೆ ನಡೆಯದೆ ವಿಶ್ವಾಸ ಮತಕ್ಕೆ ಹಾಕುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದರಿಂದ ರಾಜ್ಯಪಾಲರು ವಿಶ್ವಾಸ ಮತ ಯಾಚನೆಯನ್ನು 6 ಗಂಟೆಯೊಳಗೆ ನಡೆಸಬೇಕು ಎಂದು ಮರುವಿಜ್ಞಾಪನೆ ಮಾಡಿದ್ದರು. ಆದರೆ ಚರ್ಚೆ ಇನ್ನೂ ಮುಗಿಯದ ಕಾರಣ ವಿಶ್ವಾಸ ಮತ ಪ್ರಕ್ರಿಯೆ ನಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News