ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡದಿರುವುದೇ ಗೊಂದಲಕ್ಕೆ ಕಾರಣ: ಶೋಭಾ

Update: 2019-07-19 17:04 GMT

ಬೆಂಗಳೂರು, ಜು.19: ಅತೃಪ್ತ ಶಾಸಕರು ನೀಡಿದ್ದ ರಾಜೀನಾಮೆಗಳನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಅಂಗೀಕಾರ ಮಾಡಿದ್ದರೆ ಈ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಾಜೀನಾಮೆಗಳನ್ನು ಸ್ವೀಕರಿಸಲು ಹಿಂದೆ-ಮುಂದೆ ನೋಡಿದ ಪರಿಣಾಮವಿಂದು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದ್ದು, ಎಲ್ಲವೂ ಗೊಂದಲಮಯವಾಗಿದೆ ಎಂದು ದೂರಿದರು.

ದಿನ ಬೆಳಗಾದರೆ ಅಧಿಕಾರಿಗಳು ಎಲ್ಲಿರುತ್ತಾರೆ ಎಂದು ಗೊತ್ತಿರುವುದಿಲ್ಲ. ಕುಮಾರಸ್ವಾಮಿ ಬಹುಮತ ಸಾಬೀತಿನಿಂದ ಯಾಕೆ ಓಡಿ ಹೋಗ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸಭಾಧ್ಯಕ್ಷರು ಕೂಡಲೇ ಬಹುಮತ ಸಾಭೀತುಪಡಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬೃಂದಾವನ ಧ್ವಂಸ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ, ಬೃಂದಾವನ ಧ್ವಂಸ ಮಾಡಿರುವ ಘಟನೆ ನಮ್ಮ ಸಮಾಜಕ್ಕೆ ಹಿತಕರವಾಗಿಲ್ಲ. ಇದರ ಬಗ್ಗೆ ತನಿಖೆ ನಡೆಸಲು ಸರಕಾರ ಸತ್ತಿದೆ. ನವಬೃಂದಾವನ ಉತ್ತರಾದಿ ಮಠಕ್ಕೆ ಸೇರಿರುವ ಜಾಗ. ಆದರೆ ದುಷ್ಕೃತ್ಯ ನಡೆಸಿರುವ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News