ವಿಧೇಯಕಗಳು ಕನ್ನಡದಲ್ಲಿರಲು ಸುತ್ತೋಲೆ: ಸರಕಾರದ ನಿರ್ಧಾರಕ್ಕೆ ಎಸ್.ಜಿ.ಸಿದ್ದರಾಮಯ್ಯ ಸ್ವಾಗತ

Update: 2019-07-19 17:32 GMT

ಬೆಂಗಳೂರು, ಜು.19: ಸಚಿವ ಸಂಪುಟದಲ್ಲಿ ಅನುಮೋದನೆ ಕೋರಿ ಮಂಡಿಸುವ ಎಲ್ಲ ಕರಡು ವಿಧೇಯಕ ಹಾಗೂ ನಿಯಮಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕೆಂದು ಸರಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.

ಸಚಿವ ಸಂಪುಟ ಟಿಪ್ಪಣಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಂಡಿಸುತ್ತಿರುವುದು ಸರಿ. ಆದರೆ, ಸಚಿವ ಸಂಪುಟ ಟಿಪ್ಪಣಿಗೆ ಲಗತ್ತಿಸಿ ಸಚಿವ ಸಂಪುಟದ ಅನುಮೋದನೆ ಕೋರಿ ವಿವಿಧ ಇಲಾಖೆಗಳಿಂದ ಮಂಡಿಸುತ್ತಿರುವ ಕರಡು ವಿಧೇಯಕ ಅಥವಾ ನಿಯಮಗಳು ಆಂಗ್ಲ ಭಾಷೆಯಲ್ಲಿರುತ್ತವೆ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಬುಧವಾರ ಸುತ್ತೋಲೆ ಹೊರಡಿಸಿ, ಎಲ್ಲವೂ ಕನ್ನಡದಲ್ಲಿಯೇ ಇರಬೇಕೆಂದು ಹೇಳಿದ್ದರು. ಈ ನಿರ್ಧಾರವನ್ನು ಪ್ರಾಧಿಕಾರದ ಅಧ್ಯಕ್ಷ ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News