ಪ್ರಶಸ್ತಿ ಉಳಿಸಿಕೊಂಡ ಭಾರತ ಪುರುಷರ ತಂಡ ಮಹಿಳಾ ತಂಡಕ್ಕೆ ಚೊಚ್ಚಲ ಟ್ರೋಪಿ

Update: 2019-07-19 18:50 GMT

ಕಾಮನ್‌ವೆಲ್ತ್ ಟಿಟಿ ಕಟಕ್, ಜು.19: ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಭಾರತೀಯ ಪುರುಷರ ತಂಡ ಇಂಗ್ಲೆಂಡ್‌ನ್ನು ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಮಹಿಳಾ ತಂಡ ಸಿಂಗಾಪುರವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬರ್ತ್‌ಡೇ ಬಾಯ್ ಹರ್ಮೀತ್ ದೇಸಾಯಿ ಅವರು ಉತ್ತಮ ಪ್ರದರ್ಶನದ ನೆರವಿನಿಂದ ಭಾರತ, ಇಂಗ್ಲೆಂಡ್ ತಂಡವನ್ನು 3-2 ಅಂತರದಿಂದ ಮಣಿಸಿತು.ಸತ್ಯನ್ ಹಾಗೂ ಶರತ್ ಕಮಲ್ ಭಾರತದ ಗೆಲುವಿಗೆ ಕಾಣಿಕೆ ನೀಡಿದರು.

1997ರಿಂದ ಪ್ರಶಸ್ತಿ ಮೇಲೆ ಬಿಗಿಹಿಡಿತ ಹೊಂದಿದ್ದ ಸಿಂಗಾಪುರವನ್ನು 3-0 ಅಂತರದಿಂದ ಸೋಲಿಸಿದ ಮಹಿಳಾ ತಂಡ ಮೊದಲ ಬಾರಿ ಪ್ರಶಸ್ತಿ ಜಯಿಸಿತು. ಸಿಂಗಾಪುರ ತಂಡ ಸತತ 8 ಬಾರಿ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಪ್ರಶಸ್ತಿ ಜಯಿಸಿದೆ. ಅರ್ಚನಾ ಕಾಮತ್, ಮಣಿಕಾ ಬಾತ್ರಾ ಹಾಗೂ ಮಧುರಿಕಾ ಭಾರತಕ್ಕೆ ಭರ್ಜರಿ ಗೆಲುವು ತಂದರು. 2015ರಲ್ಲಿ ಸೂರತ್‌ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತ ಇದೀಗ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. 2004ರಲ್ಲಿ ಕೌಲಾಲಂಪುರದಲ್ಲಿ ಮೊಲ ಬಾರಿ ಭಾರತ ಪ್ರಶಸ್ತಿ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News