ವಿಂಡೀಸ್ ಪ್ರವಾಸದಿಂದ ಹೊರಗುಳಿಯಲು ನಿರ್ಧಾರ: 2 ತಿಂಗಳು ಧೋನಿ ಎಲ್ಲಿ ಸೇವೆ ಸಲ್ಲಿಸಲಿದ್ದಾರೆ ಗೊತ್ತಾ?

Update: 2019-07-20 10:13 GMT

ಹೊಸದಿಲ್ಲಿ, ಜು.20: ಭಾರತೀಯ ಕ್ರಿಕೆಟ್ ತಂಡದ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿಯಲು ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ನಿರ್ಧರಿಸಿದ್ದಾರೆ. ಟೆರಿಟೋರಿಯಲ್ ಆರ್ಮಿಯ ಪ್ಯಾರಚೂಟ್ ರೆಜಿಮೆಂಟ್ ನಲ್ಲಿ  ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಮುಂದಿನ ಎರಡು ತಿಂಗಳು ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸಲಿದ್ದಾರೆಂಬ ಮಾಹಿತಿಯಿದೆ. ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಈ ವಿಚಾರವನ್ನು ದೃಢಪಡಿಸಿದ್ದಾರೆ.

ಮೂವತ್ತೆಂಟು ವರ್ಷದ ಧೋನಿ ತಮ್ಮ ನಿರ್ಧಾರದ ಕುರಿತಂತೆ ರವಿವಾರ ನಡೆಯಲಿರುವ ಆಯ್ಕೆ ಸಮಿತಿಯ  ಸಭೆಗೆ ಮುಂಚಿತವಾಗಿಯೇ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಆದರೆ ಧೋನಿ ಕ್ರಿಕೆಟ್ ಜೀವನದಿಂದ ನಿವೃತ್ತರಾಗುತ್ತಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

“ನಾವು ಮೂರು ವಿಚಾರ ಹೇಳಲಿಚ್ಚಿಸುತ್ತೇವೆ. ಅವರು ಸದ್ಯ ಕ್ರಿಕೆಟ್ ನಿಂದ ನಿವೃತ್ತರಾಗುತ್ತಿಲ್ಲ. ಅವರು ಎರಡು ತಿಂಗಳ ಬ್ರೇಕ್ ಪಡೆದು ತಾವು ಈ ಹಿಂದೆ ನೀಡಿದ ಭರವಸೆಯಂತೆ ತಮ್ಮ ಪ್ಯಾರಾ ಮಿಲಿಟರಿ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಲಿದ್ದಾರೆ. ಅವರ ನಿರ್ಧಾರವನ್ನು ಕಪ್ತಾನ ವಿರಾಟ್ ಕೊಹ್ಲಿ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್ ಅವರಿಗೆ ತಿಳಿಸಿದ್ದೇವೆ'' ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧೋನಿಯ ಸ್ಥಾನದಲ್ಲಿ ರಿಷಬ್ ಪಂತ್ ಅವರು  ತಂಡದ ವಿಕೆಟ್ ಕೀಪರ್ ಆಗಲಿದ್ದಾರೆಂಬ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News