ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ‘ತಪ್ಪಾಗಿದೆ’ ಎಂದು ಒಪ್ಪಿಕೊಂಡ ಅಂಪೈರ್ ಧರ್ಮಸೇನ: ವರದಿ

Update: 2019-07-21 10:32 GMT

ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಓವರ್ ನಲ್ಲಿ ‘ಓವರ್ ತ್ರೋ’ಗಾಗಿ ಇಂಗ್ಲೆಂಡ್ ಗೆ 6 ರನ್ ಗಳನ್ನು ನೀಡಿದ್ದು ‘ತಪ್ಪು’ ಎಂದು ಆ ಪಂದ್ಯದಲ್ಲಿ ಅಂಪೈರ್ ಆಗಿದ್ದ ಕುಮಾರ್ ಧರ್ಮಸೇನ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕೊನೆಯ ಓವರ್ ನ 3ನೆ ಎಸೆತದಲ್ಲಿ ಬೆನ್ ಸ್ಟೋಕ್ಸ್ 2ನೆ ರನ್ ಗಾಗಿ ಓಡುತ್ತಿದ್ದಾಗ ಸ್ಟಂಪ್ ನೆಡೆಗೆ ಎಸೆದ ಬಾಲ್ ಬ್ಯಾಟ್ ಗೆ ತಾಗಿ ಬೌಂಡರಿ ತಲುಪಿತ್ತು. ಇದಕ್ಕಾಗಿ ಇಂಗ್ಲೆಂಡ್ ಗೆ 6 ರನ್ ಗಳನ್ನು ನೀಡಲಾಗಿತ್ತು.

ಕೊನೆಯ ಓವರ್ ಕೊನೆಯ ಬಾಲ್ ನಲ್ಲಿ ಪಂದ್ಯ ಟೈ ಆಗಿತ್ತು. ನಂತರ ಸೂಪರ್ ಓವರ್ ಕೂಡ ಟೈ ಆಗಿದ್ದು, ಬೌಂಡರಿಗಳ ಆಧಾರದಲ್ಲಿ ಇಂಗ್ಲೆಂಡ್ ಜಯ ಗಳಿಸಿದೆ.

ಬಾಲ್ ಎಸೆದಾಗ ಬ್ಯಾಟ್ಸ್ ಮ್ಯಾನ್ 2ನೆ ರನ್ ಗೆ ಕ್ರಾಸ್ ಆಗದೇ ಇದ್ದ ಕಾರಣ 5 ರನ್ ಗಳನ್ನು ನೀಡಬೇಕಾಗಿತ್ತು ಹೊರತು, 6 ರನ್ ಗಳನ್ನಲ್ಲ ಎಂದು ಮಾಜಿ ಅಂಪೈರ್ ಸೈಮನ್ ಟಫೆಲ್ ಹೇಳಿದ್ದರು. ಇದೀಗ ಧರ್ಮಸೇನ ‘ತಪ್ಪಾಗಿದೆ’ ಎಂದು ಹೇಳಿದ್ದು 5 ರನ್ ಗಳನ್ನು ನೀಡಬೇಕಾಗಿತ್ತು ಎಂದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News