ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ 20ನೇ ವಾರ್ಷಿಕ ಪ್ರಚಾರಾರ್ಥ ರಕ್ತದಾನ ಶಿಬಿರ

Update: 2019-07-21 11:02 GMT

ದುಬೈ, ಜು.21: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಯೂತ್ ವಿಂಗ್ ಇದರ 20ನೇ ವಾರ್ಷಿಕೋತ್ಸವದ ಪ್ರಚಾರಾರ್ಥವಾಗಿ ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದಲ್ಲಿ ಶುಕ್ರವಾರ ಇಲ್ಲಿನ ಲತೀಫಾ ಆಸ್ಪತ್ರೆ ಹೂದ್ ಮೆಹ್ತಾದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದ ಉದ್ಘಾಟನೆ ಹಾಗೂ ವಾರ್ಷಿಕ ಸಮ್ಮೇಳನದ ಪ್ರಚಾರ ಸಭೆಯು ಯೂತ್ ವಿಂಗ್ ಅಧ್ಯಕ್ಷ ಸಮದ್ ಬಿರಾಳಿ ಅಧ್ಯಕ್ಷತೆಯಲ್ಲಿ ನಡೆಯಿತು.

20ನೇ ವಾರ್ಷಿಕ ಕಾರ್ಯಕ್ರಮದ ಸ್ವಾಗತ ಸಮಿತಿಯ ಸಂಚಾಲಕ ಬದ್ರುದ್ದೀನ್ ಹೆಂತಾರ್ ದುಆಗೈದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರಿಯ ಸಮಿತಿ ಅಧ್ಯಕ್ಷ ಹಾಜಿ ಇಕ್ಬಾಲ್ ಕನ್ನಂಗಾರ್, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ 20 ನೇ ವಾರ್ಷಿಕ ಸಮ್ಮೇಳನದ ಪ್ರಚಾರವನ್ನು ರಕ್ತದಾನದ ಮೂಲಕ ಪ್ರಾರಂಬಿಸಲಾಗಿದೆ ಎಂದರು.

ಬ್ಲಡ್ ಡೋನರ್ಸ್ ಮಂಗಳೂರು(ರಿ )ಯು.ಎ.ಇ ಇದರ ಕಾರ್ಯ ನಿರ್ವಾಹಕ ಶಂಸುದ್ದೀನ್ ಪಿಲಿಗೂಡು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಲ್ ಇಹ್ಸಾನ್ ವುಮೆನ್ಸ್ ಕಾಲೇಜು ಅಧ್ಯಕ್ಷ ಮುಹಮ್ಮದ್ ಇಬ್ರಾಹಿಂ ಮೂಳೂರು ಮಾತನಾಡುತ್ತ ಡಿ.ಕೆ.ಎಸ್.ಸಿ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಇಹ್ಸಾನ್ ವಿದ್ಯಾ ಸಂಸ್ಥೆಗಳ ಬಗ್ಗೆ ವಿವರಿಸಿ ಡಿ.ಕೆ.ಎಸ್.ಸಿ ಸಂಘಟನೆ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಮಹತ್ವವನ್ನು ಸವಿವರವಾಗಿ ವಿವರಿಸಿದರು.

20 ನೇ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಶಕೂರ್ ಮನಿಲಾ, ರಾಷ್ಟ್ರಿಯ ಸಮಿತಿಯ ಹಿರಿಯ ನಾಯಕ ಅಬ್ದುಲ್ಲತೀಫ್ ಮುಲ್ಕಿ ಹಾಗೂ ಯುಸೂಫ್ ಮಾತನಾಡಿ ಅರ್ಲಪದವು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಡಿ.ಕೆ.ಎಸ್.ಸಿ. ರಾಷ್ಟ್ರಿಯ ಸಮಿತಿಯ ಕೋಶಾಧಿಕಾರಿ ಇಬ್ರಾಹೀಂ ಹಾಜಿ ಕಿನ್ಯ, ಬ್ಲಡ್ ಡೋನರ್ಸ್ ಮಂಗಳೂರು (ರಿ )ಯು.ಎ.ಇ ಇದರ ಕಾರ್ಯ ನಿರ್ವಾಹಕ ನಝೀರ್ ಬಿಕರ್ನಕಟ್ಟೆ, ಯುವ ಉದ್ಯಮಿ ಇಷಾಮ್ ಅರ್ಷದ್, ಡಿ.ಕೆ.ಎಸ್.ಸಿ. ಪ್ರಮುಖರಾದ ಹಸನಬ್ಬ ಕೊಳ್ನಾಡ್, ಅಬ್ದುಲ್ಲಾ ಬೀಜಾಡಿ, ಅಬ್ದುಲ್ ರಹಿಮಾನ್ ಸಜಿಪ, ಅಬ್ದುಲ್ಲಾ ಪೆರುವಾಯಿ, ಹಸನಬ್ಬ ಹಳೆಯಂಗಡಿ, ಸಮೀರ್ ಇಬ್ರಾಹೀಂ ಕಲ್ಲಾರೆ, ಇಬ್ರಾಹೀಂ ಕಳತ್ತೂರ್, ಕಮರುದ್ದೀನ್ ಗುರುಪುರ ಮತ್ತಿತರರು ಉಪಸ್ಥಿತರಿದ್ದರು.

ಯೂತ್ ವಿಂಗ್ ಸದಸ್ಯರಾದ ಜಮಾಲ್ ಬಜ್ಪೆ, ರಿಯಾಝ್ ಕಿನ್ಯ, ಆಫೀಲ್ ಬಿ..ಕೆ, ಸಫ್ವಾನ್ ಕರಾವಳಿ, ಅರ್ಶದ್ ಅರ್ಕುಳ ಮತ್ತಿತರರು ಕಾರ್ಯಕ್ರಮದ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

 ರಕ್ತದಾನ ಶಿಬಿರದಲ್ಲಿ ಒಟ್ಟು 63 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಡಿ.ಕೆ.ಎಸ್.ಸಿ. ರಾಷ್ಟ್ರಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ನವಾಝ್ ಕೋಟೆಕ್ಕಾರ್ ಸ್ವಾಗತಿಸಿದರು.

ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಕಮಾಲ್ ಅಜ್ಜಾವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News