ಒಕ್ಕಲಿಗರ ಸಂಘ ಕೋಮಾ ಅವಸ್ಥೆಯಲ್ಲಿದೆ: ನಂಜಾವಧೂತ ಸ್ವಾಮೀಜಿ

Update: 2019-07-21 17:10 GMT

ಬೆಂಗಳೂರು, ಜು.21: ಒಕ್ಕಲಿಗ ಸಂಘ ಕೋಮಾ ಅವಸ್ಥೆಯಲ್ಲಿದೆ. ಸಂಘಕ್ಕೆ ಅಗತ್ಯವಾದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಮಟ್ಟಕೆ ತಲುಪಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ನೇಗಿಲಯೋಗಿ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಕ್ಕಲಿಗ ಸಂಘ ತನ್ನ ಸ್ವಕೃತ ಅಪರಾಧದಿಂದಾಗಿ ಸರಕಾರ ಮಧ್ಯಪ್ರವೇಶ ಮಾಡಬೇಕಾಗಿ ಬಂದದ್ದು ಅವಮಾನ. ಸಂಘಕ್ಕೆ ಚುನಾವಣೆ ನಡೆಸಲು ನ್ಯಾಯಾಲಯದ ತೀರ್ಪಿಗಾಗಿ ಕಾಯಬೇಕಾಗಿ ಬಂದದ್ದು ದುರಾದೃಷ್ಟಕರವೆಂದು ವಿಷಾದಿಸಿದರು.

ಒಕ್ಕಲಿಗೆ ಸಮುದಾಯದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ್ , ಕೃಷ್ಣಬೈರೇಗೌಡ ಹೀಗೆ ಕೇವಲ ಮುಖಂಡರಿಗಾಗಿ ಮಾತ್ರ ಸಮುದಾಯ ಇರಬಾರದು. ಒಕ್ಕಲಿಗ ಸಮುದಾಯದ ಸಾಮಾನ್ಯ ವ್ಯಕ್ತಿಗೆ ಅನ್ಯಾಯವಾದರೂ ಸ್ಪಂದಿಸದಿದ್ದರೆ ಹೇಡಿತನವಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News