ಸೃಜನಶೀಲ ಅಭಿವ್ಯಕ್ತಿ ಶಿಕ್ಷಕನ ಅತ್ಯಂತ ಶ್ರೇಷ್ಠ ಕಲೆ: ಸಚ್ಚಿನಂದನ್ ದಾಸ್ ಸ್ವಾಮಿ

Update: 2019-07-21 17:20 GMT

ಬೆಂಗಳೂರು, ಜು. 21: ‘ಶಿಕ್ಷಕರು ಶಿಸ್ತುಬದ್ಧತೆ, ನೈತಿಕತೆ, ಆತ್ಮವಿಶ್ವಾಸ, ಮೌಲ್ಯ, ಸಜ್ಜನತೆ ಮುಂತಾದ ಸದ್ಗುಣಗಳನ್ನು ಬೋಧಿಸಿ, ಜೀವನದಲ್ಲಿ ಯಶಸ್ವಿಯಾಗುವಂತೆ ಹರಸುತ್ತಾರೆ’ ಎಂದು ಗೌಡಿಮಠದ ಸಚ್ಚಿನಂದನ್ ದಾಸ್ ಸ್ವಾಮಿ ಹೇಳಿದ್ದಾರೆ.

ರವಿವಾರ ಬಾಗಲಗುಂಟೆಯ ಆಚಾರ್ಯ ಗುರುಕುಲ ವಿದ್ಯಾಮಂದಿರ ಶಾಲೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸೃಜನಶೀಲ ಅಭಿವ್ಯಕ್ತಿ ಮತ್ತು ಅಂತರ್ಗತ ಜ್ಞಾನವನ್ನು ಜಾಗೃತಗೊಳಿಸುವುದೇ ಶಿಕ್ಷಕನ ಅತ್ಯಂತ ಶ್ರೇಷ್ಠ ಕಲೆ’ ಎಂದು ಹೇಳಿದರು.

ಶಾಲೆಯ ಸಂಸ್ಥಾಪಕ ಆಚಾರ್ಯ ವೆಂಕಟೇಶ್‌ಮೂರ್ತಿ, ಶಿಕ್ಷಕರೆಂದರೆ ಪುಸ್ತಕವನ್ನು ಹಿಡಿದು ಪಾಠವನ್ನು ಮಾಡುವವರಲ್ಲ, ಅದರ ಸಾರವನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಯಲು ಪ್ರೇರೇಪಿಸಿ ಚೈತನ್ಯ ತುಂಬುವ ಶಕ್ತಿ’ ಎಂದು ಇದೆ ವೇಳೆ ತಿಳಿಸಿದರು.

ಪ್ರಾಂಶುಪಾಲ ಕಾವ್ಯಸಂಜೀವಿನಿ ಈ ಜಗತ್ತಿನಲ್ಲಿ ನಮ್ಮ ಕಡೆಯಿಂದ ಯಾವುದೇ ಪ್ರತಿಫಲ ಬಯಸದೇ ಒಳ್ಳೆಯ ಜ್ಞಾನವಂತನಾಗಿ ದೇಶವನ್ನು ಬೆಳಗಲಿ ಎಂದು ವಿದ್ಯೆ ಕಲಿಸುವವರು ಗುರುಗಳು’ ಎಂದು ಸ್ಮರಿಸಿದರು. ವಿದ್ಯಾರ್ಥಿಗಳು ಶಿಕ್ಷಕರ ಪಾದಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News