×
Ad

ವಿಶ್ವಾಸಮತ ಯಾಚನೆ: ಸ್ಪೀಕರ್ ಡೆಡ್ ಲೈನ್ ಮೀರಿದ ಮೈತ್ರಿ ಸರಕಾರ

Update: 2019-07-23 18:09 IST

ಬೆಂಗಳೂರು, ಜು.19: ಮಂಗಳವಾರ ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಸೂಚಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರ ಡೆಡ್ ಲೈನ್ ಸಮಯ ಮೀರಿದ್ದು, ಇನ್ನೂ ಕೂಡಾ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆದಿಲ್ಲ.

ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮಂಗಳವಾರ ಸಂಜೆ 5 ರಿಂದ 6 ಗಂಟೆಯೊಳಗೆ ಮುಕ್ತಾಯಗೊಳಿಸುವುದಾಗಿ ಗಡುವು ನೀಡಿ, ಸದನವನ್ನು ಇಂದು ಬೆಳಗ್ಗೆ 10 ಗಂಟೆಗೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮುಂದೂಡಿದ್ದರು. ಈ ಮೂಲಕ ಹಲವು ದಿನಗಳಿಂದ ಮುಂದೂಡಿಕೊಂಡು ಬರುತ್ತಿದ್ದ ಮೈತ್ರಿ ಸರಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಅಂತಿಮ ಡೆಡ್ ಲೈನ್ ನೀಡಿದ್ದರು. ಆದರೆ 6 ಗಂಟೆಯಾದರೂ  ಮೈತ್ರಿ ಸರಕಾರ ಇನ್ನೂ ಕೂಡಾ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಸಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News