ಐಎಂಎ ವಂಚನೆ ಪ್ರಕರಣ: ಮನ್ಸೂರ್ ಖಾನ್ ಜು.26ರ ವರೆಗೆ ಈ.ಡಿ. ವಶಕ್ಕೆ

Update: 2019-07-23 16:47 GMT

ಬೆಂಗಳೂರು, ಜು.23: ಐಎಂಎ(ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪೆನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮನ್ಸೂರ್ ಖಾನ್‌ನನ್ನು ಮತ್ತೆ ವಿಚಾರಣೆಗಾಗಿ ಮೂರು ದಿನಗಳ ಕಾಲ 1ನೆ ಸಿಸಿಎಚ್ ನ್ಯಾಯಾಲಯ ಜಾರಿ ನಿರ್ದೇಶನಾಲಯ(ಈ.ಡಿ.)ದ ವಶಕ್ಕೆ ನೀಡಿ ಆದೇಶಿಸಿತು.

ಮನ್ಸೂರ್‌ಗೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆಯಲ್ಲಿ ಈ.ಡಿ. ಕಸ್ಟಡಿಯಲ್ಲಿ ಸರಿಯಾಗಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಮತ್ತಷ್ಟು ದಿನ ವಿಚಾರಣೆಗಾಗಿ ಈ.ಡಿ. ವಶಕ್ಕೆ ನೀಡಬೇಕೆಂದು ಈ.ಡಿ. ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ನ್ಯಾಯಪೀಠವು ಮನ್ಸೂರ್‌ ಖಾನ್‌ನನ್ನು ಜು.26ರವರೆಗೆ ಮತ್ತೆ ಮನ್ಸೂರ್‌ನನ್ನು ವಿಚಾರಣೆಗೆಂದು ಈ.ಡಿ. ವಶಕ್ಕೆ ನೀಡಿ ಆದೇಶ ಹೊರಡಿಸಿದರು. ಇದೇ ವೇಳೆ ಎಸ್‌ಐಟಿ ತಮಗೆ ವಿಚಾರಣೆಗೆ ಅಗತ್ಯವಿದೆ ಎಂದು ಮನವಿಯನ್ನು ಸಲ್ಲಿಸಿದರು. ಆದರೆ, ನ್ಯಾಯಾಲಯ ಮಾತ್ರ ಮತ್ತೆ ಈ.ಡಿ. ಅಧಿಕಾರಿಗಳ ವಶಕ್ಕೆ ನೀಡಿದೆ.

ಸದ್ಯ ನ್ಯಾಯಾಲಯದಿಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಮನ್ಸೂರ್‌ಖಾನ್‌ನನ್ನು ಪೊಲೀಸ್ ಭದ್ರತೆಯ ಮೂಲಕ ಈ.ಡಿ. ಅಧಿಕಾರಿಗಳು ಕರೆದೊಯ್ದಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News