×
Ad

ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ನಿಷೇಧಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Update: 2019-07-23 23:11 IST

ಬೆಂಗಳೂರು, ಜು.23: ಬಿಬಿಎಂಪಿ ವ್ಯಾಪ್ತಿಯಲ್ಲಿ 1 ವರ್ಷದವರೆಗೆ ಎಲ್ಲ ಬಗೆಯ ಜಾಹೀರಾತು ನಿಷೇಧಿಸಿ 2018ರ ಆ.6ರಂದು ಬಿಬಿಎಂಪಿ ಕೈಗೊಂಡಿದ್ದ ನಿರ್ಣಯಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ಸಂಬಂಧ ಹೊರಾಂಗಣ ಜಾಹೀರಾತು ಕಂಪೆನಿ ಮೆಸರ್ಸ್ ಪಾಪ್ಯುಲರ್ ಅಡ್ವಟೈಸರ್ಸ್ ಸೇರಿ ಮತ್ತಿತರ ಜಾಹೀರಾತು ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿತು.

ಪಾಲಿಕೆ ನಿರ್ಣಯ ಬೈಲಾ ಅನುಗುಣವಾಗಿ ಇಲ್ಲ. ಮೇಲ್ನೋಟಕ್ಕೆ ನಿಯಮ ಉಲ್ಲಂಘನೆಯಾಗಿದೆ. ಸಾಂಸ್ಥಿಕ ನಿಯಮಗಳಿಗೆ ವಿರುದ್ಧವಾದ ನಿರ್ಣಯ ಇದಾಗಿದೆ. ಹೀಗಾಗಿ, ಬಿಬಿಎಂಪಿ ನಿರ್ಣಯಕ್ಕೆ ತಡೆ ನೀಡಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಅನಧಿಕೃತ ಪೋಸ್ಟರ್, ಬ್ಯಾನರ್ ಮತ್ತು ಎಲ್ಲ ಬಗೆಯ ಹೋರ್ಡಿಂಗ್ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದ್ದ ಕಾರಣಕ್ಕೆ ಬಿಬಿಎಂಪಿ 2018ರ ಆ.6ರಂದು ಎಲ್ಲ ಬಗೆಯ ಜಾಹೀರಾತು ನಿಷೇಧಿಸಿ ನಿರ್ಣಯ ಕೈಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News