ಆ್ಯಶಸ್ ಸರಣಿ: ಜೆರ್ಸಿಯಲ್ಲಿ ಆಟಗಾರರ ಹೆಸರು, ನಂಬರ್

Update: 2019-07-23 18:54 GMT

ಹೊಸದಿಲ್ಲಿ, ಜು.23: ಟೆಸ್ಟ್ ಕ್ರಿಕೆಟ್ ಆಮೂಲಾಗ್ರ ಬದಲಾವಣೆಗೆ ಸಜ್ಜಾಗುತ್ತಿದೆ. ಮುಂಬರುವ ಆ್ಯಶಸ್ ಸರಣಿಯಲ್ಲಿ ಆಟಗಾರರು ತಮ್ಮ ಹೆಸರು ಹಾಗೂ ಸಂಖ್ಯೆಗಳಿರುವ ಬಿಳಿ ಜೆರ್ಸಿಯನ್ನು ಧರಿಸಿ ಆಡಲಿದ್ದಾರೆ.

 ದೀರ್ಘ ಸಮಯದಿಂದ ಏಕದಿನ ಹಾಗೂ ಟಿ-20 ಜೆರ್ಸಿಗಳಲ್ಲಿ ಹೆಸರು ಹಾಗೂ ನಂಬರ್‌ಗಳನ್ನು ಹಾಕುವುದು ಸಂಪ್ರದಾಯ. ಆದರೆ, ಟೆಸ್ಟ್ ಪಂದ್ಯಗಳಲ್ಲಿ ಈ ಸಂಪ್ರದಾಯವಿಲ್ಲ. ಇಂಗ್ಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಟೆಸ್ಟ್ ನಾಯಕ ಜೋ ರೂಟ್ ತನ್ನ ಹೆಸರು ಹಾಗೂ ಸಂಖ್ಯೆ ಇರುವ ಬಿಳಿ ಜೆರ್ಸಿಯನ್ನು ಧರಿಸಿರುವ ಫೋಟೊವನ್ನು ಹಾಕಿದೆ. ಆದರೆ, ಆಸ್ಟ್ರೇಲಿಯದ ಆಟಗಾರರು ಕೂಡಾ ಹೆಸರು ಹಾಗೂ ಸಂಖ್ಯೆಗಳಿರುವ ಜೆರ್ಸಿಗಳನ್ನು ಧರಿಸುತ್ತಾರೋ ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ತಂಡಗಳ ನಡುವೆ ನಡೆಯುವ ಆ್ಯಶಸ್ ಸರಣಿಯು ಕ್ರಿಕೆಟ್ ಕಿಟ್‌ಗೆ ಆಧುನಿಕ ಸ್ಪರ್ಶ ನೀಡಲಿದೆ ಎಂದು ಈ ವರ್ಷಾರಂಭದಲ್ಲಿ ವರದಿಯಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹ ಬೆಳವಣಿಗೆಯ ಬಗ್ಗೆ ಟ್ವಿಟರ್‌ನಲ್ಲಿ ಅಭಿಮಾನಿಗಳಿಂದ ವಿಭಿನ್ನ ಅಭಿಪ್ರಾಯ ಹೊರಹೊಮ್ಮಿತ್ತು. ಜು.14 ರಂದು ಲಾರ್ಡ್ಸ್‌ನಲ್ಲಿ ಮೊದಲ ಬಾರಿ ಏಕದಿನ ವಿಶ್ವಕಪ್ ಕಿರೀಟ ಧರಿಸಿದ್ದ ಇಂಗ್ಲೆಂಡ್ ಐತಿಹಾಸಿಕ ಸಾಧನೆ ಮಾಡಿತ್ತು. ಆಸ್ಟ್ರೇಲಿಯ ವಿರುದ್ಧ ಸಾಂಪ್ರದಾಯಿಕ ಟೆಸ್ಟ್ ಹಣಾಹಣಿಯಲ್ಲೂ ಇದೇ ಗೆಲುವಿನ ತೀವ್ರತೆ ಕಾಯ್ದುಕೊಳ್ಳಲು ಬಯಸಿದೆ. ಆಸ್ಟ್ರೇಲಿಯ ವಿರುದ್ಧ ಆ್ಯಶಸ್ ಸರಣಿಯು ಆಗಸ್ಟ್ 1 ರಿಂದ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News