ಗುಮ್ನಾಮಿ ಬಾಬಾ ನಿಜವಾಗಿಯೂ ನೇತಾಜಿಯೇ ? ಇಲ್ಲಿದೆ ಉತ್ತರ

Update: 2019-07-24 08:02 GMT

ಲಕ್ನೋ: ಗುಮ್ನಾಮಿ ಬಾಬಾ ಅವರ ನಿಗೂಢತೆಯನ್ನು ಭೇದಿಸುವ ಸಲುವಾಗಿ ನೇಮಕವಾಗಿದ್ದ ನ್ಯಾಯಮೂರ್ತಿ ವಿಷ್ಣು ಸಹಾಯ್ ಆಯೋಗದ ವರದಿಯನ್ನು ಉತ್ತರ ಪ್ರದೇಶ ಸಂಪುಟದಲ್ಲಿ ಮಂಗಳವಾರ ಮಂಡಿಸಲಾಗಿದೆ.

ಬಹುತೇಕ ಜನ ನಂಬಿದಂತೆ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರೇ ಗುಮ್ನಾಮಿ ಬಾಬಾ ಎಂದು ನಿರ್ಧರಿಸುವುದು ಕಷ್ಟ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

2016ರಲ್ಲಿ ನೇಮಕವಾದ ಆಯೋಗದ ವರದಿಯನ್ನು ಇದೀಗ ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ. ಆದರೆ ಬಾಬಾ ಹಾಗೂ ಬೋಸ್ ನಡುವಿನ ಸಾಮ್ಯತೆಯನ್ನು ವರದಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ಇಂಗ್ಲಿಷ್, ಬಂಗಾಳಿ ಹಾಗೂ ಹಿಂದಿ ಮೂರೂ ಭಾಷೆಗಳಲ್ಲಿ ಪ್ರಭುತ್ವ ಸ್ಥಾಪಿಸಿದ್ದ ಬೋಸ್ ಸ್ವತಃ ಬರೆದ ಹಾಗೂ ಅವರ ಇಷ್ಟದ ಲೇಖಕರ ಪುಸ್ತಕಗಳನ್ನು ಪತ್ತೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಗುಮ್ನಾಮಿ ಬಾಬಾ ಕೂಡಾ ಈ ಮೂರೂ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿದ್ದರು ಹಾಗೂ ಪ್ರಭಾವಿಯಾಗಿದ್ದರು ಎಂದು ವರದಿ ಉಲ್ಲೇಖಿಸಿದೆ.

"ಗುಮ್ನಾಮಿ ಬಾಬಾ ಅವರೇ ಸುಭಾಸ್‌ ಚಂದ್ರ ಬೋಸ್ ಎಂಬ ವದಂತಿ ಹಬ್ಬುವವರೆಗೂ ಫೈಝಾಬಾದ್ ನಿವಾಸದಲ್ಲಿ ವಾಸವಿದ್ದ ಬಾಬಾ, ಆ ಬಳಿಕ ಅಲ್ಲಿಂದ ತೆರಳಿದರು ಎಂದೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ" ಎಂದು ಮೂಲಗಳು ಖಚಿತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News