×
Ad

ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ

Update: 2019-07-24 22:08 IST

ಬೆಂಗಳೂರು, ಜು. 24: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚನೆ ಪ್ರಕ್ರಿಯೆ ಆರಂಭಕ್ಕೂ ಮೊದಲೇ ಮುಖಂಡ ನಡುವೆ ಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಆರಂಭವಾಗಿದ್ದು, ಆರೆಸೆಸ್ಸ್-ದಿಲ್ಲಿ ಮಟ್ಟದಲ್ಲಿ ಲಾಬಿಯೂ ಪ್ರಾರಂಭಗೊಂಡಿದೆ.

ಹೈಕಮಾಂಡ್ ಸೂಚನೆ ನೀಡಿದರೆ ನಾಳೆ ಅಥವಾ ನಾಡಿದ್ದು ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಆದರೆ, ಅದಕ್ಕೂ ಮೊದಲೇ ನೂತನ ಸರಕಾರ ರಚನೆ ಬಳಿಕ ಯಾವುದೇ ರೀತಿಯ ಸಂಕಷ್ಟ ಸೃಷ್ಟಿಯಾಗದ ರೀತಿಯಲ್ಲಿ ಕ್ರಮ ವಹಿಸಬೇಕಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರ ಭವಿಷ್ಯ ಅಡಕತ್ತರಿಯಲ್ಲಿದೆ. ಸ್ಪೀಕರ್ ಯಾವ ಕ್ರಮ ಕೈಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಯಾವ ರೀತಿ ಆದೇಶ ನೀಡಲಿದೆ ಎಂದು ನಿರೀಕ್ಷೆಯಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಎಸ್‌ವೈ ಬಹುಮತ ಸಾಬೀತುಪಡಿಸಬೇಕಿದೆ. ಜತೆಗೆ ನೂತನ ಸಂಪುಟ ವಿಸ್ತರಣೆ ರಚನೆ ಮಾಡಬೇಕಿದೆ.

ನೂತನ ಸರಕಾರ ರಚನೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಆಕಾಂಕ್ಷಿಗಳ ದಂಡು ಯಡಿಯೂರಪ್ಪ, ಆರೆಸೆಸ್ಸ್ ಮತ್ತು ವರಿಷ್ಠರ ಮಟ್ಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಬಿಎಸ್‌ವೈ ಅವರ ಡಾಲರ್ಸ್‌ ಕಾಲನಿಯಲ್ಲಿನ ನಿವಾಸದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ಬೀಡುಬಿಟ್ಟಿದೆ.

ಪ್ರದೇಶ, ಜಾತಿ ಆಧರಿಸಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆದಿದೆ. ಈ ಮಧ್ಯೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತರು ಹಾಗೂ ಆರೆಸೆಸ್ಸ್ ಹಿನ್ನೆಲೆ ಸೇರಿದಂತೆ ಯಾರಿಗೆ ಸಚಿವ ಹುದ್ದೆ ನೀಡಬೇಕು ಎಂಬುದು ಬಿಜೆಪಿ ವರಿಷ್ಠರಿಗೆ ತೀವ್ರ ತಲೆನೋವಾಗಿದೆ.

ಕರಾವಳಿ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಪ್ರದೇಶ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಿಂದ ಬಿಜೆಪಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿದ್ದಾರೆ. ಅಲ್ಲದೆ, ಹಿರಿಯರ ದಂಡು ದೊಡ್ಡದೇ ಇದೆ. ಹೀಗಾಗಿ ಯಾರಿಗೆ ಸ್ಥಾನ ಕಲ್ಪಿಸಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News