×
Ad

ಐಎಂಎ ಹಗರಣ: ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್ ಬಂಧನ

Update: 2019-07-24 22:18 IST

ಬೆಂಗಳೂರು, ಜು.24: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ನಕಲಿ ದಾಖಲಾತಿ ಹಾಗೂ ತಪ್ಪು ಅಂಕಿ ಅಂಶಗಳನ್ನು ಸೃಷ್ಟಿಸಿ ಆದಾಯ ತೆರಿಗೆ ಇಲಾಖೆಗೆ ನೀಡಿದ ಆರೋಪ ಸಂಬಂಧ ಆರೋಪಿ ಇಕ್ಬಾಲ್ ಖಾನ್‌ನನ್ನು ವಿಶೇಷ ತನಿಖಾ ತಂಡವು ಬಂಧಿಸಿದೆ.

ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್, ಈ ಸಂಸ್ಥೆಯು ಲಾಭದಾಯಕ ಮಟ್ಟದಲ್ಲಿದೆ ಎಂಬುದಾಗಿ ಬಿಂಬಿತವಾಗುವಂತೆ ಹಾಗೂ ಇದರಿಂದ ಸಾರ್ವಜನಿಕರನ್ನು ಪ್ರೇರೇಪಣೆಗೊಳಗಾಗಿ ಹೆಚ್ಚಿನ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದ. ಮನ್ಸೂರ್ ಖಾನ್ ಜೊತೆಗೆ ಸೇರಿ ಅಪರಾಧಿಕ ಒಳಸಂಚನ್ನು ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಕಾರ್ಯಾಚರಣೆಯನ್ನು ಐಎಂಎ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಡಾ.ಬಿ.ಆರ್.ರವಿಕಾಂತೇಗೌಡ ಹಾಗೂ ಬೆಂಗಳೂರು ನಗರ ನೇತೃತ್ವದ ವಿಶೇಷ ಪೊಲೀಸ್ ತಂಡವು ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News