ಉಪ ನಗರ ರೈಲು ಯೋಜನೆ ಪರಿಷ್ಕೃತ ಡಿಪಿಆರ್ ಸಲ್ಲಿಕೆ

Update: 2019-07-24 17:26 GMT

ಬೆಂಗಳೂರು, ಜು.24 : ನಗರದ ಸಂಚಾರ ದಟ್ಟಣೆ ಪರಿಹಾರಕ್ಕಾಗಿ ರೂಪಿಸಲಾಗಿರುವ ಉಪ ನಗರ ರೈಲು ಯೋಜನೆಯ ಪರಿಷ್ಕೃತ ವಿವರ ಯೋಜನಾ ವರದಿಯನ್ನು ರೈಲ್ವೆ ಮಂಡಳಿಗೆ ಸಿದ್ಧಪಡಿಸಿರುವ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕಾನಾಮಿಕ್ ಸರ್ವೀಸ್(ರೈಟ್ಸ್) ನೈರುತ್ಯ ಇಲಾಖೆಗೆ ಸಲ್ಲಿಸಿದೆ.

ಮುಂಬೈ ನಗರ ಸ್ಥಳೀಯ ರೈಲು ಸಂಪರ್ಕ ಮಾದರಿಯಲ್ಲಿ ಉಪ ನಗರ ರೈಲು ಯೋಜನೆ ಜಾರಿ ಮಾಡಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ರೈಟ್ಸ್ ಸಂಸ್ಥೆ ಈಗಾಗಲೇ ವಿವರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ಸಲ್ಲಿಸಿತ್ತು. ಆದರೆ, ವರದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಮತ್ತೊಮ್ಮೆ ಸಲ್ಲಿಸುವಂತೆ ನೈರುತ್ಯ ರೈಲ್ವೆ ಸೂಚನೆ ನೀಡಿತ್ತು. ಅದರಂತೆ ಇದೀಗ ರೈಟ್ಸ್ ಸಂಸ್ಥೆಯು ವರದಿ ಸಿದ್ಧಪಡಿಸಿ ನೀಡಿದೆ. ಅದರಲ್ಲಿ 82 ರೈಲು ನಿಲ್ದಾಣಗಳ ಬದಲಿಗೆ 53 ನಿಲ್ದಾಣಗಳಿಗೆ ಪ್ರಸ್ತಾವನೆ ಇಟ್ಟಿದೆ.

161 ಕಿ.ಮೀ. ರೈಲು ಸಂಪರ್ಕ: ಡಿಪಿಆರ್‌ನಂತೆ ಒಟ್ಟು 161 ಕಿ.ಮೀ. ರೈಲು ಸಂಪರ್ಕ ಏರ್ಪಡಲಿದೆ. ಅದರ ಜತೆಗೆ 60 ಕಿ.ಮೀ.ಎಲಿವೇಟೆಡ್ ಮಾರ್ಗ ಹಾಗೂ 101 ಕಿ.ಮೀ.ಉದ್ದದ ನೆಲಮಟ್ಟದ ಮಾರ್ಗ ನಿರ್ಮಾಣ ಅಥವಾ ಹಳೇ ಮಾರ್ಗ ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ. 53 ನಿಲ್ದಾಣಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕಿದ್ದು, ಈ ಎಲ್ಲ ಕಾರ್ಯಗಳಿಗಾಗಿ ಅಂದಾಜು 16 ಸಾವಿರ ಕೋಟಿ ರೂ.ಗಳು ಅಗತ್ಯವಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News