ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್
Update: 2019-07-25 17:40 IST
ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಕೆಐಎಎಲ್ ವಿಮಾನ ನಿಲ್ದಾಣ ದಿಂದ 5 ಗಂಟೆ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಹೈಕಮಾಂಡ್ ಭೇಟಿ ಮಾಡಲು ಹೊರಟಿರುವ ಬಗ್ಗೆ ಮಾಹಿತಿ ದೊರಕಿದೆ.
ಸರ್ಕಾರದ ಪತನ ಹಿನ್ನಲೆಯಲ್ಲಿ ಈ ಬಗ್ಗೆ ಮಾಹಿತಿಯನ್ನ ಅವರು ಕಾಂಗ್ರೆಸ್ ನಾಯಕರಿಗೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಡಿಕೆಶಿವಕುಮಾರ್ ಅವರು ಮಾತನಾಡಿ, ನಾನು ಕೋರ್ಟ್ ಕೇಸ್ ನಿಮಿತ್ತ ದೆಹಲಿಗೆ ತೆರಳುತ್ತಿದ್ದೇನೆ. ಪಕ್ಷದಲ್ಲಿ ಈಗ ಯಾರು ಅತೃಪ್ತರಿಲ್ಲ, ಎಲ್ಲರೂ ತೃಪ್ತರೇ ಎಂದು ಹೇಳಿದರು.
ಸರ್ಕಾರ ರಚನೆ ಮಾಡುವುದು ಬಿಡುವುದು ಯಡಿಯೂರಪ್ಪರಿಗೆ ಬಿಟ್ಟ ವಿಚಾರ, ನಾನು ಯಾವ ರಾಜಕೀಯ ಉದ್ದೇಶಕ್ಕೆ ದೆಹಲಿಗೆ ತೆರಳುತ್ತಿಲ್ಲ ಎಂದೂ ಈ ಸಂದರ್ಭ ಡಿಕೆಶಿ ಹೇಳಿದರು.