ಏಕೈಕ ಟೆಸ್ಟ್: ಐರ್ಲೆಂಡ್‌ಗೆ ಹೀನಾಯ ಸೋಲು

Update: 2019-07-26 19:03 GMT

 ಲಾರ್ಡ್ಸ್, ಜು.26: ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕ್ರಿಸ್ ವೋಕ್ಸ್ ದಾಳಿಗೆ ಸಿಲುಕಿ 38 ರನ್‌ಗಳಿಗೆ ಆಲೌಟಾಗಿದ್ದು, ಇಂಗ್ಲೆಂಡ್ 143 ರನ್‌ಗಳ ಜಯ ಗಳಿಸಿದೆ.

ಗೆಲುವಿಗೆ 182 ರನ್‌ಗಳ ಸವಾಲನ್ನು ಪಡೆದ ಐರ್ಲೆಂಡ್ ತಂಡ 15.4 ಓವರ್‌ಗಳಲ್ಲಿ 38 ರನ್‌ಗಳಿಗೆ ಆಲೌಟಾಗಿದೆ.

ವೋಕ್ಸ್ 17ಕ್ಕೆ 6 ಮತ್ತು ಸ್ಟುವರ್ಟ್ ಬ್ರಾಡ್ 19ಕ್ಕೆ 4 ವಿಕೆಟ್‌ಗಳನ್ನು ವಿಕೆಟ್ ಉಡಾಯಿಸುವ ಮೂಲಕ ಐರ್ಲೆಂಡ್‌ನ ಗೆಲುವಿನ ಆಸೆಗೆ ತಣ್ಣಿರೆರಚಿದರು. ಐರ್ಲೆಂಡ್ 38 ರನ್ ಗಳಿಸಿರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ 7ನೇ ಕನಿಷ್ಠ ಸ್ಕೋರ್ ಆಗಿದೆ.

ಐರ್ಲೆಂಡ್‌ನ ಬ್ಯಾಟ್ಸ್‌ಮನ್ ಜೇಮ್ಸ್ ಮೆಕ್‌ಕಲಮ್ (11) ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸಿದರು.

ಮಳೆಯಿಂದಾಗಿ ತಡವಾಗಿ ಆರಂಭಗೊಂಡಿದ್ದ ಪಂದ್ಯದಲ್ಲಿ ಐರ್ಲೆಂಡ್‌ನ ಸ್ಟುವರ್ಟ್ ಥಾಮ್ಸನ್ ದಿನದ ಓವರ್‌ನ ಮೊದಲ ಎಸೆತದಲ್ಲಿ ಇಂಗ್ಲೆಂಡ್‌ನ ಒಲಿ ಸ್ಟೋನ್(0)ರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಇಂಗ್ಲೆಂಡ್ 77.5 ಓವರ್‌ಗಳಲ್ಲಿ 303 ರನ್‌ಗಳಿಗೆ ಆಲೌಟಾಗಿದೆ.

ಗೆಲುವಿಗೆ 182 ರನ್‌ಗಳ ಸವಾಲನ್ನು ಪಡೆದ ಐರ್ಲೆಂಡ್‌ಗೆ ಟೆಸ್ಟ್ ಗೆಲ್ಲುವ ಎಲ್ಲ ಅವಕಾಶ ಇತ್ತು. ಆದರೆ ಇಂಗ್ಲೆಂಡ್‌ನ ಬೌಲರ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ. 4ನೇ ಓವರ್‌ನ ಕೊನೆಯ ಎಸೆತದಲ್ಲಿ ಐರ್ಲೆಂಡ್‌ನ ನಾಯಕ ವಿಲಿಯಮ್ ಪೋರ್ಟರ್‌ಫೀಲ್ಡ್(2) ಅವರಿಗೆ ವೋಕ್ಸ್ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ 27 ರನ್ ಸೇರಿಸುವಷ್ಟರಲ್ಲಿ ಐರ್ಲೆಂಡ್ ಆಲೌಟಾಗಿದೆ.

►ಸಂಕ್ಷಿ ಪ್ತ ಸ್ಕೋರ್ ವಿವರ

  • ಇಂಗ್ಲೆಂಡ್ ಮೊದಲ ಇನಿಂಗ್ಸ್ 85
  •  ಐರ್ಲೆಂಡ್ ಮೊದಲ ಇನಿಂಗ್ಸ್ 207
  • ಇಂಗ್ಲೆಂಡ್ ಎರಡನೇ ಇನಿಂಗ್ಸ್ 77.5
  •  ಓವರ್‌ಗಳಲ್ಲಿ ಆಲೌಟ್ 303

 (ಲೀಚ್ 92, ಜೇಸನ್ ರಾಯ್ 72; ಆದಿರ್66ಕ್ಕೆ 3, ಥಾಮ್ಸನ್ 44ಕ್ಕೆ 3, ರಾಂಕಿನ್ 86ಕ್ಕೆ 2).

  • ಐರ್ಲೆಂಡ್ ಎರಡನೇ ಇನಿಂಗ್ಸ್ 15.4
  • ಓವರ್‌ಗಳಲ್ಲಿ ಆಲೌಟ್ 38

( ಜೇಮ್ಸ್ ಮೆಕ್‌ಕಲಮ್11; ಬ್ರಾಡ್ 19ಕ್ಕೆ 4, ವೋಕ್ಸ್ 17ಕ್ಕೆ 6).

► ಪಂದ್ಯಶ್ರೇಷ್ಠ: ಜಾಕ್ ಲೀಚ್

ಮಾರ್ಕ್ ಆದಿರ್ ಏಕೈಕ ಸಿಕ್ಸರ್ ಸಿಡಿಸಿದರು. ಟೆಸ್ಟ್ ನಲ್ಲಿ ಕನಿಷ್ಠ ಸ್ಕೋರ್ 26. ಆದರೆ ಐರ್ಲೆಂಡ್ ಕನಿಷ್ಠ ಮೊತ್ತಕ್ಕೆ ಆಲೌಟಾಗುವ ಭೀತಿಯಿಂದ ಪಾರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News