ಪ್ರೊ ಕಬಡ್ಡಿ ಲೀಗ್: ಗುಜರಾತ್‌ಗೆ ಭರ್ಜರಿ ಜಯ

Update: 2019-07-27 05:02 GMT

ಹೈದರಾಬಾದ್, ಜು.26: ರೋಹಿತ್ ಗುಲಿಯಾ ಅವರ ಅಮೋಘ ಪ್ರದರ್ಶನದ ನೆರವಿನಿಂದ ಗುಜರಾತ್ ಫೋರ್ಚುನ್ ಜೈಂಟ್ಸ್ ತಂಡ ಯುಪಿ ಯೋಧಾ ವಿರುದ್ಧ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 44-19 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.

ಈ ಗೆಲುವಿನ ಮೂಲಕ ಗುಜರಾತ್ ತಂಡ ಯುಪಿ ವಿರುದ್ಧ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಈ ಹಿಂದಿನ 3 ಮುಖಾಮುಖಿಯಲ್ಲಿ ಗುಜರಾತ್ 2ರಲ್ಲಿ ಜಯ ಸಾಧಿಸಿ, 1ರಲ್ಲಿ ಟೈ ಸಾಧಿಸಿತ್ತು.

ಬಂಗಾಳ ವಿರುದ್ಧ ಆಡಿದ್ದ ಲೀಗ್‌ನ ಮೊದಲ ಪಂದ್ಯದಲ್ಲಿ ಸೋತಿದ್ದ ಗುಜರಾತ್ ಇದೀಗ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಗುಜರಾತ್‌ನ ಪರ ರೋಹಿತ್ 11 ಅಂಕ ಗಳಿಸಿದರೆ, ಸಚಿನ್ ಹಾಗೂ ಪರ್ವೇಶ್ ತಲಾ ಆರು ಅಂಕವನ್ನು ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ರೋಹಿತ್ ಲೀಗ್‌ನಲ್ಲಿ ಒಟ್ಟು 100 ರೈಡ್ ಪಾಯಿಂಟ್ಸ್ ಗಿಟ್ಟಿಸಿಕೊಂಡರು.

ಹೀನಾಯ ಸೋಲನುಭವಿಸಿದ ಯುಪಿ ಯೋಧಾ ಪರ ಶ್ರೀಕಾಂತ್ ಜಾಧವ್ 5 ಅಂಕ ಗಳಿಸಿದರು. ಇದು ಯೋಧಾ ಪರ ದಾಖಲಾದ ಗರಿಷ್ಠ ಅಂಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News