ಕ್ಯಾಲಿಫೋರ್ನಿಯದ ಆಹಾರ ಮೇಳದಲ್ಲಿ ಗುಂಡಿನ ದಾಳಿ: ಮೂವರು ಮೃತ್ಯು, ಹಲವರಿಗೆ ಗಾಯ

Update: 2019-07-29 06:49 GMT

ಗಿಲ್‌ರಾಯ್, ಜು.29: ಕ್ಯಾಲಿಫೋರ್ನಿಯಾದಲ್ಲಿ ರವಿವಾರ ಪ್ರಮುಖ ಆಹಾರ ಮೇಳದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ದೇಶದ ಅತ್ಯಂತ ದೊಡ್ಡ ಆಹಾರ ಹಬ್ಬದಲ್ಲಿ ಈ ಅಹಿತಕರ ಘಟನೆ ನಡೆದಿದೆ. ನ್ಯೂಯಾರ್ಕ್ ಟೈಮ್ಸ್ ಸಹಿತ ಹಲವು ಅಮೆರಿಕ ಮಾಧ್ಯಮಗಳ ವರದಿ ಪ್ರಕಾರ ಕನಿಷ್ಠ ಮೂರು ಮಂದಿ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕದಲ್ಲಿ ಗುಂಡು ಹಾರಾಟ ಪ್ರಕರಣಗಳು ಪದೇ ಪದೇ ನಡೆಯುತ್ತಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News