ರಾಜ್ಯ ಓರ್ವ ಶ್ರೇಷ್ಠ ವಿದ್ವಾಂಸನನ್ನು ಕಳಕೊಂಡಿದೆ : ಅಲ್ ಮದೀನಾ ಸೌದಿ ಸಮಿತಿ

Update: 2019-07-30 14:16 GMT

ದಮಾಮ್: ಅಲ್ ಮದೀನಾ ಸಾರಥಿ, ಮರಹುಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನಾಥ, ನಿರ್ಗತಿಕರ ಪಾಲಿಗೆ ಆಶಾಕಿರಣ, ಸರಿಸುಮಾರ್ 500 ಕ್ಕೂ ಮಿಕ್ಕ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ನಡೆಸಿ ಅವರ  ಕಣ್ಣೀರೊರೆಸುವ  ಮೂಲಕ  ರಾಜ್ಯದ ಓರ್ವ ನಿಷ್ಕಲಂಕ ವ್ಯಕಿತ್ವದ ಮಹಾನುಭಾವರನ್ನು ಕಳಕೊಂಡು ಅನಾಥವಾಗಿದೆ ಎಂದು ಅಲ್ ಮದೀನಾ ಸೌದಿ ರಾಷ್ಟ್ರೀ ಯ ಸಮಿತಿಯು ತೀವ್ರ  ಕಳವಳ ವ್ಯಕ್ತಪಡಿಸಿದೆ.

ಅವರು ಜೀವನದಲ್ಲಿ ಕಷ್ಟಪಟ್ಟು ತನ್ನ ಅರೋಗ್ಯ ವನ್ನು ಲೆಕ್ಕಿಸದೆ ಮಾಡಿಟ್ಟ ಅಲ್ ಮದೀನಾ ಇವತ್ತು ಸಮುದಾಯದ ದೊಡ್ದ  ಸಂಪತ್ತಾಗಿದೆ. ಸೌದಿ ಅರೇಬಿಯಾದಲ್ಲಿ ಎಲ್ಲಾ ಕಡೆಗಳಲ್ಲಿಯೂ ಸಂಚರಿಸಿ ಈ ಇಳಿ ವಯಸ್ಸಿನಲ್ಲಿಯೂ ಅವರ ಪ್ರವರ್ಥನ ಎಲ್ಲರಿಗ್ಗೂ ಮಾರ್ಗದರ್ಶನ ಎಂದು  ಅಲ್  ಮದೀನಾ ಸೌದಿ ರಾಷ್ಟ್ರೀ ಯ ಸಮಿತಿಯಾ ಅಧ್ಯಕ್ಷ ಎನ್ ಎಸ್ ಅಬ್ದುಲ್ಲಾ ಮಂಜನಾಡಿ, ಪ್ರ. ಕಾರ್ಯದರ್ಶಿ ಎಂ ಜಿ ಇಕ್ಬಾಲ್ ಮಲ್ಲೂ ರು, ಕೋಶಾಧಿಕಾರಿ ಅಬ್ದುಲ್ ರಹಮಾನ್ ಮದನಿ ರಿಯಾದ್ ತಿಳಿಸಿದ್ದಾರೆ.

ಸಭೆಯಲ್ಲಿ ಅಲ್ ಮದೀನಾ ರಾಷ್ಟ್ರೀಯ ಸಮಿತಿ ಸಲಹೆಗಾರರಾದ  ಟಿ ಎಚ್ ಬಶೀರ್ ತೋಟಾಲ್, ಇಝುದ್ದೀನ್ ಮುಸ್ಲಿಯಾರ್ , ದಮಾಮ್ ಘಟಕಾಧ್ಯಕ್ಷ ಅಝೀಝ್ ಮುಸ್ಲಿಯಾರ್ ಕುತ್ತಾರ್, ಮಾಜಿ ಅಧ್ಯಕ್ಷ ಕಾಸಿಂ ಅಡ್ಡೂರು, ರಾಷ್ಟ್ರೀಯ ಸಮಿತಿ  ಜೊತೆ ಕಾರ್ಯದರ್ಶಿ ಉಸ್ಮಾನ್ ಮಂಜನಾಡಿ ಅಲ್  ಕೊಬಾರ್ ಘಟಕಾಧ್ಯಕ್ಷ ಮಹಮ್ಮದ್ ಮಳೆಬೆಟ್ಟು, ಜುಬೈಲ್  ಘಟಾಕಾಧ್ಯಕ್ಷ ರಶೀದ್ ವಳವೂರು, ಮಾಜಿ ಅಧ್ಯಕ್ಷ ಮೂಸಾ ಹಾಜಿ ಕಿನ್ಯ, ಅಲ್  ಹಸ್ಸಾ ಅಧ್ಯಕ್ಷ ಮೊದಿನ್ ಹಾಜಿ,  ರಾಷ್ಟ್ರೀಯ ಸಮಿತಿ ಸಂಚಾಲಕ ಬಾಬಾ ಮಂಜೇಶ್ವರ, ರಾಷ್ಟ್ರೀ ಯ ಸಮಿತಿ ಲೆಕ್ಕ ಪರಿಶೋಧಕ ಇಸ್ಮಾಯಿಲ್ ಪೊಯ್ಯಲ್  ರಾಷ್ಟ್ರೀ ಯ ಸಮಿತಿ ಸದಸ್ಯ ಇಬಾಹಿಮ್ ಪಡಿಕ್ಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News